Friday, February 05, 2016

ಬಡ ಕುಟುಂಬದಿಂದ ಬಂದ ಆ ಸೋದರರು ’ಕ್ವಿಕ್ ಹೀಲ್’ ಕಟ್ಟಿದ ಪರಿಯಿದು

ಲೇಖನ : .ಸೀತಾರಾಮ ಶಾಸ್ತ್ರಿ
    ಇಂದು ದೇಶದೆಲ್ಲೆಡೆ  “ಮೇಕ್ ಇನ್ ಇಂಡಿಯಾಘೋಷಣೆ ಮೊಳಗುತ್ತಿದೆ. ವಿದೇಶೀ ತಂತ್ರಜ್ಞಾನ ಬಳಸಿಕೊಂಡು ಅರ್ಥಾತ್ ನಕಲು ಮಾಡಿ ತಯಾರಿಸಿದ ಉತ್ಪನ್ನಗಳಿಗೂ ಮೇಕ್ ಇನ್ ಇಂಡಿಯಾ ಹಣೆಪಟ್ಟಿ ಕಟ್ಟಿ ಬೆನ್ನು ತಟ್ಟಿಕೊಳ್ಳುತ್ತಿರುವ ನೂರಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅಂತದ್ದರಲ್ಲಿ ಇಪ್ಪತ್ತು ವರ್ಷಗಳ ಹಿಂದೆಯೇ(1995), ನಮ್ಮ ದೇಶದಲ್ಲಿ ಕಂಪ್ಯೂಟರ್ ಬಳಕೆ ಆಗತಾನೆ ವಿಸ್ತಾರ ಗೊಳ್ಳುತ್ತಿದ್ದಾಗಲೆ, ಇಂಟರ್ ನೆಟ್ ಎಂಬುದು ಇನ್ನೂ ಕಣ್ಣು ಬಿಡುತ್ತಿದ್ದಾಗಲೆ, ತಂತ್ರಾಂಶಗಳಿಗೆ ಬಂದೆರಗುವ ವೈರಸ್ ಎಂಬ ಮಹಮ್ಮಾರಿಯ ಕುರಿತು ಅರಿತು, ಅವುಗಳ ನಿವಾರಣೆಗಾಗಿ ಆಂಟಿವೈರಸ್ ತಂತ್ರಾಂಶವನ್ನು ದೇಶೀಯವಾಗಿ ತಯಾರಿಸಿದ ಕೀರ್ತಿ ಅಣ್ಣತಮ್ಮಂದಿರಿಗೆ ಸಲ್ಲುತ್ತದೆ. ಅವರೆಂದರೆ ಮಹಾರಾಷ್ಟ್ರ ಮೂಲದ ಕೈಲಾಸ್ ಸಾಹೇಬ್ರಾವ್ ಕಾಟ್ಕರ್ ಮತ್ತು ಸಂಜಯ್ ಸಾಹೇಬ್ರಾವ್ ಕಾಟ್ಕರ್. ಅವರು ಸಿದ್ಧಪಡಿಸಿ ದೇಶಾದಾದ್ಯಂತ ಲಕ್ಷಾಂತರ ಕಂಪ್ಯೂಟರ್, ಸ್ಮಾರ್ಟ್ ಫೋನುಗಳಿಗೆ ವೈರಸ್ ಗಳಿಂದ ರಕ್ಷಣೆ ಕೊಡುತ್ತಿರುವ ಆಂಟಿವೈರಸ್ ತಂತ್ರಾಂಶವೇಕ್ವಿಕ್ಹೀಲ್’!.
   ಇಂದು ಭಾರತದ ಕಂಪ್ಯೂಟರ್, ಸ್ಮಾರ್ಟ್ಫೋನ್ ಬಳಕೆದಾರರಿಗೆ ಚಿರಪರಿಚಿತ ವಾಗಿರುವ ಮೊಟ್ಟಮೊದಲ ಸ್ವದೇಶೀ ಆಂಟಿವೈರಸ್ ತಂತ್ರಾಂಶ ರೂಪುಗೊಂಡ ಬಗೆ, ಅದರ ಏಳು ಬೇಳುಗಳ ಕಥೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ತಾಂತ್ರಿಕ ಅಧಿಕಾರಿಯಾಗಿರುವ ಸಂಜಯ್ ಕಾಟ್ಕರ್ ಅವರ ಮಾತುಗಳಲ್ಲೇ ಕೇಳುವುದೆಂದರೆ ಅದೊಂದು ರೋಚಕವಾದ (ಸಿನಿಮಾ ತೆಗೆಯಲು ಅರ್ಹವಾದ) ಕಥೆಯೇ ಆದೀತು. ಇಂದು ಭಾರತವಷ್ಟೇ ಅಲ್ಲದೆ ಜಪಾನ್, ಅಮೆರಿಕಾ, ದುಬೈ, ಆಫ್ರಿಕಾ ಮೊದಲಾದ ದೇಶಗಳ ಮಾರುಕಟ್ಟೆಗಳಿಗೂ ಲಗ್ಗೆಯಿಟ್ಟು ನೂರಾರು ಕೋಟಿ ರೂಪಾಯಿಗಳ ವ್ಯಾಪಾರ ನಡೆಸುತ್ತಾ ಬಳಕೆದಾದರ ಮನ ಗೆದ್ದಿರುವ ಕ್ವಿಕ್ಹೀಲ್ ಅನ್ನು ಮತ್ತಷ್ಟು ಬೆಳೆಸುವುದಕ್ಕಾಗಿ ಷೇರು ಮಾರುಕಟ್ತೇಯ ಮೂಲಕ ರೂ.250 ಕೋಟಿ ಸಂಗ್ರಹ ಮಾಡಲು ಇದೇ ಫಿಬ್ರವರಿ 8 ರಿಂದ 10 ವರೆಗೆ ಪ್ರಾಥಮಿಕ ಸಾರ್ವಜನಿಕ ಕೊಡುಗೆ (ಐಪಿಓ) ಹೊರಡಿಸಿದೆ. ಸಂಬಂಧ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಟಿಯಲ್ಲಿಗಂಧದಗುಡಿಯೊಂದಿಗೆ ಸಂಜಯ್ ಹಂಚಿಕೊಂಡ ತಮ್ಮ ಯಶಸ್ಸಿನ ಕಥೆ ಇದು..
   ಮಹಾರಾಷ್ಟ್ರದ ಬಡ ರೈತರಲ್ಲಿ ಒಬ್ಬರಾದ ಸಾಹೇಬ್ರಾವ್ ಕಾಟ್ಕರ್ ಅವರ ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯವರಾದ ಕೈಲಾಸ್ ಕುಟುಂಬದ್ ಪೋಷಣೆಗಾಗಿ ತಮ್ಮ ತಂದೆ ಪಡುತ್ತಿರುವ ಕಷ್ಟಗಳನ್ನು ನೋಡಲಾಗದೆ ತಮ್ಮ ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ನಿಲ್ಲಿಸಿ  ಸ್ಕ್ರೀನ್ ಪ್ರಿಂಟಿಂಗ್ ಕೆಲಸ ಕಲಿತು ಮೂಲಕ ಸ್ವಯಂ ಉದ್ಯೋಗವನ್ನು ಕಂಡುಕೊಂಡು ದುಡಿಯಲಾರಂಭಿಸಿದರು. ಕೆಲ ದಿನಗಳ ನಂತರ ಜೊತೆಗೆ ರೇಡಿಯೋ ರಿಪೇರಿ ಮಾಡತೊಡಗಿದರು. ಆನಂತರ ಬ್ಯಾಂಕುಗಳಲ್ಲಿ ಬಳಸುತ್ತಿದ್ದ ಕ್ಯಾಲಿಕ್ಯುಲೇಟರ್, ಲೆಡ್ಜರ್ ಪೋಸ್ಟಿಂಗ್ ಮಿಷಿನ್ ರಿಪೇರಿ ಮಾಡಲು ಶುರು ಹಚ್ಚಿಕೊಂಡರು. ಅಷ್ಟರಲ್ಲಾಗಲೇ ಬ್ಯಾಂಕುಗಳಲ್ಲಿ ಕಂಪ್ಯೂಟರುಗಳ ಬಳಕೆ ಆರಂಭವಾಗತೊಡಗಿತ್ತು. ಕಂಪ್ಯೂಟರ್ ರಿಪೇರಿ ಕಲಿತರೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಎಂಬುದನ್ನು ಮನಗಂಡ ಕೈಲಾಸ್ ಕೆಲಸಕ್ಕೂ ಕೈ ಹಾಕಿದರು. ಸಮಯಕ್ಕೆ ಅವರ ತಮ್ಮನಾದ ಸಂಜಯ್ ಇಂಜಿನೀರಿಂಗ್ ಕೋರ್ಸಿಗೆ ಪ್ರವೇಶ ಪಡೆದಿದ್ದರು. ಅವರದ್ದು ಕಂಪ್ಯೂಟರ್ ಸೈನ್ಸ್ ವಿಭಾಗವಾಗಿದ್ದರೂ ಕಾಲೇಜಿನಲ್ಲಿ ಸಾಕಷ್ಟು ಕಂಪ್ಯೂಟರುಗಳು ಲಭ್ಯವಿಲ್ಲದ ಕಾರಣ ಅವುಗಳ ಬಳಕೆಗೆ ಅವಕಾಶ ಅಷ್ಟಾಗಿ ಸಿಗುತ್ತಿರಲಿಲ್ಲ. ಹಾಗಾಗಿ ಬಿಡುವಿನ ವೇಳೆಯಲ್ಲಿ ಅಣ್ಣನ ಜೊತೆಗಿದ್ದು ರಿಪೇರಿಗಾಗಿ ಬರುತ್ತಿದ್ದ ಕಂಪ್ಯೂಟರುಗಳಲ್ಲಿ ಕೆಲಸ ಕಲಿಯ ತೊಡಗಿದರು. ಸಮಯದಲ್ಲಿ ಅವರಿಗೆ ತಂತ್ರಾಂಶಗಳಿಗೆ ಬಂದೆರಗಿ ಅವುಗಳನ್ನು ನಾಶಮಾಡುವ ವೈರಸ್ ಗಳ ಕುರಿತಂತೆ ಅರಿವಾಯಿತು. ಇಂಜಿನೀರಿಂಗ್ ಮುಗಿದು ಸ್ನಾತಕೋತ್ತರ ಪದವಿಗೆ ಸೇರಿದ ಸಂಜಯ್ ಓದಿನ ಜೊತೆಗೆ ವೈರಸ್ ನಿವಾರಣೆ ಕುರಿತು ಪ್ರಯೋಗಗಳನ್ನು ಮಾಡತೊಡಗಿದರು. ಅವರ ಸಾಧನೆಯ ಫಲವಾಗಿ ಪ್ರಪ್ರಥಮ ಸ್ವದೇಶೀ ಆಂಟಿವೈರಸ್ ತಂತ್ರಾಂಶ ಕ್ವಿಕ್ ಹೀಲ್ ರೂಪುಗೊಂಡಿತು.
   ಸಂಜಯ್ ತಮ್ಮ ಸ್ನಾತಕೋತ್ತರ ಪದವಿ ಮುಗಿಸಿ ಕಾಲೇಜಿನಿಂದ ಹೊರಬೀಳುವ ಮೊದಲೇ 1995 ರಲ್ಲಿ  ಕ್ವಿಕ್ಹೀಲ್ ಮೊದಲ ಆವ್ರತ್ತಿಯನ್ನು ಬಿಡುಗಡೆ ಮಾಡಿದರು. ಅದರ ಮಾರ್ಕೆಟ್ ಮಾಡುವ ಜವಾಬ್ದಾರಿಯನ್ನು ಅಣ್ಣ ಕೈಲಾಸ್ ವಹಿಸಿಕೊಂಡರು. ಮೊದಲು ಪುಣೆ ನಗರದಲ್ಲಿ ಕಂಪ್ಯೂಟರ್ ಮಳಿಗೆಗಳಲ್ಲಿ ಕ್ವಿಕ್ಹೀಲ್ ಮಾರಾಟ ಮಾಡತೊಡಗಿದರು. ಆದರೆ ಅಂದಿನ ದಿನಗಳಲ್ಲಿ ವೈರಸ್ ಕಾಟ ಅಷ್ಟಾಗಿ ಇಲ್ಲದಿರುವುದು ಮತ್ತು ದುಡ್ಡುಕೊಟ್ಟು ತಂತ್ರಾಂಶಗಳನ್ನು ಕೊಳ್ಳಲು ಕಂಪ್ಯೂಟರ್ ಬಳ್ಕೆದಾರರು ಆಸಕ್ತಿ ತೋರದ ಕಾರಣ ಅಣ್ಣ ತಮ್ಮಂದಿರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿರುವುದಿಲ್ಲ. ಆದರೂ ಛಲ ಬಿಡದೆ ಸಂಶೋಧನೆ ಮತ್ತು ಮಾರುಕಟ್ಟೆ ವಿಸ್ತರಣೆಯನ್ನು ಮುಂದುವರೆಸಿದ ಫಲವಾಗಿ ಅವರ ವ್ಯವಹಾರ ದಿನೇದಿನೇ ಅಭಿವ್ರದ್ಧಿ ಆಗುತ್ತಾ ಬಂದಿತು. ಹಾಗಾಗಿ 1998 ರಿಂದ ಕಂಪ್ಯೂಟರ್ ರಿಪೇರಿಯನ್ನು ಪಕ್ಕಕ್ಕಿಟ್ಟು ಪೂರ್ತಿಯಾಗಿ ಕ್ವಿಕ್ಹೀಲ್ ವ್ಯಾಪಾರದತ್ತ ಗಮನ ಹರಿಸಿದರು. 2002 ರಲ್ಲಿ ಅನುಭವಿಗಳಾದ ಮಾರ್ಕೆಟಿಂಗ್ ತಂಡವನ್ನು ನೇಮಿಸಿಕೊಂಡು ದೇಶದಾದ್ಯಂತ ವ್ಯಾಪಾರವನ್ನು ವಿಸ್ತರಿಸಿದರು. 2011 ರಲ್ಲಿ ಎಂಟರ್ಪ್ರೈಸ್ ಸೆಕ್ಯುರಿಟಿ ತಂತ್ರಾಂಶವನ್ನು ಅಭಿವ್ರದ್ದಿ ಪಡಿಸಿದರು. ಅಷ್ಟರಲ್ಲಿ ಇಂಟರ್ನೆಟ್ ಬಳಸ ಬಹುದಾದ ಸ್ಮಾರ್ಟ್ಫೋನಗಳು ಮಾರುಕಟ್ಟೆಯಲ್ಲಿ ವಿಜ್ರಂಭಿಸಲಾರಂಭಿಸಿದ್ದವು. ಅವುಗಳಿಗೆ ಸೂಕ್ತವಾದ ಆಂಟಿವೈರಸ್ ತಂತ್ರಾಂಶವನ್ನು 2015 ರಲ್ಲಿ ಕ್ವಿಕ್ಹೀಲ್ ನಿಂದ ಹೊರತರಲಾಯಿತು. ಹೀಗೆ ಒಂದೊಂದೇ ಮಜಲುಗಳನ್ನು ದಾಟುತ್ತಾ ಇಂದು ದೇಶದ ನಂಬರ್ ವನ್ ಆಂಟಿವೈರಸ್ ತಂತ್ರಾಂಶ ಎಂಬ ಖ್ಯಾತಿಗೆ ಕ್ವಿಕ್ಹೀಲ್ ಪಾತ್ರವಾಗಿದೆ. ಅಷ್ಟೇ ಅಲ್ಲದೆ ವಿದೇಶಗಳಿಗೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದೆ. ಇಂದು ಪ್ರತಿದಿನ ಸುಮಾರು 2.50 ಲಕ್ಷ ವೈರಸ್ ಗಳು ಉತ್ಪತ್ತಿಯಾಗುತ್ತಿದ್ದು, ಕಂಪ್ಯೂಟರ್ ಬಳಕೆದಾರರು ಅದರಲ್ಲೂ ಇಂಟರ್ನೆಟ್ ಬಳಸುವವರು ಆಂಟಿವೈರಸ್ ಬಳಸಲೇಬೇಕಾದ ಅನಿವಾರ್ಯತೆ ಏರ್ಪಟ್ಟಿದೆ. ಮುಂದಿನ ದಿನಗಳಲಿ ತಮ್ಮ ಎಂಟರ್ಪ್ರೈಸ್ ಸೆಕ್ಯುರಿಟಿ ತಂತ್ರಾಂಶವನ್ನು ಇನ್ನಷ್ಟು ಅಭಿವ್ರದ್ಧಿಗೊಳಿಸಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ವಿಕ್ಹೀಲ್ ಸ್ಥಾನವನ್ನು ಭದ್ರಗೊಳಿಸುವುದು ತಮ್ಮ ಮುಂದಿರಿವ ಗುರಿ ಎಂದು ಸಂಜಯ್ ತಮ್ಮ ಗುರಿಯನ್ನು ಸ್ಪಷ್ಟ ಪಡಿಸಿದರು. ಕಾಟ್ಕರ್ ಸಹೋದರರ ಸಾಹಸೋಪೇತ ಪ್ರಯತ್ನಕ್ಕೆ ಯಶಸ್ಸು ಕೋರುವುದುಮೇಕ್ ಇನ್ ಇಂಡಿಯಾಬೆಂಬಲಿಸಿದಂತೆ ಅಲ್ಲವೇ.!!