Thursday, April 28, 2016

ಗೃಹ ಶುದ್ಧೀಕರಣ ಮಾರುಕಟ್ಟೆ ಪ್ರವೇಶಿಸಿದ ಟಿಟಿಕೆ ಪ್ರೆಸ್ಟೀಜ್


ಮನೆ ಸ್ವಚ್ಛಗೊಳಿಸುವ ನವನವೀನ ಉತ್ಪನ್ನಗಳ ಶ್ರೇಣಿಗಳನ್ನು ಹೊಂದಿರುವ ಹೊಸ ಪ್ರೆಸ್ಟೀಜ್ ಕ್ಲೀನ್‍ಹೋಮ್ ಬಿಡುಗಡೆ  
• ದಶಕಗಳ ಕಾಲ ಭಾರತದ ಅಡುಗೆಮನೆಗಳಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದ ಬಳಿಕ ಮೊದಲ ಬಾರಿಯ ವಿಸ್ತರಣೆ 
• ಮೂಲ ಗ್ರಾಹಕರೆಡೆಗಿನ ಗಮನ ಮುಂದುವರಿಕೆ- ಭಾರತೀಯ ಗೃಹಿಣಿಯರು, ಸುಮಾರು 60 ವರ್ಷಗಳಿಂದ ಪೋಷಿಸಲ್ಪಟ್ಟಿರುವ ಸಂಬಂಧ

• 2016-17ರ ವಿತ್ತೀಯ ವರ್ಷದಲ್ಲಿ ಸಂಸ್ಥೆಯ ಆದಾಯದ ಶೇ. 5ರಷ್ಟು ಹೊಸ ಯೋಜನೆಯಿಂದ ಗಳಿಸುವ ನಿರೀಕ್ಷೆ. 
• ಏಕಕಾಲದಲ್ಲಿ ಗುಡಿಸುವ, ಒರೆಸುವ ಹಾಗೂ ಉಜ್ಜುವ ವಿಶ್ವದ ಮೊದಲ ದೇಶೀಯ ಎಲೆಕ್ಟ್ರಿಕ್ ಮೋಪ್, ವ್ಯಾಕ್ಯೂಮ್ ಕ್ಲೀನರ್ ಕಂ ಫ್ಲೋರ್ ಪಾಲಿಶರ್ ಮತ್ತು ಬಹೂಪಯೋಗಿ ಸ್ಟೀಮ್ ಕ್ಲೀನರ್ ಈ ನವನವೀನ ಉತ್ಪನ್ನಗಳ ಶ್ರೇಣಿಯಲ್ಲಿ ಒಳಗೊಂಡಿದೆ.

ಬೆಂಗಳೂರು, ಏಪ್ರಿಲ್ 28,2016: ಭಾರತದ ಬೃಹತ್ ಕಿಚನ್ ಹೋಮ್ ಅಪ್ಲೆಯನ್ಸ್ ಬ್ರಾಂಡ್ ಆಗಿರುವ ಟಿಟಿಕೆ ಪ್ರೆಸ್ಟೀಜ್, ಭಾರತೀಯ ಅಡುಗೆ ಮನೆ ಶುದ್ಧೀಕರಣ ಮಾರುಕಟ್ಟೆಗೆ(ಹೋಮ್ ಕ್ಲೀನಿಂಗ್ ಮಾರ್ಕೇಟ್) ಪ್ರವೇಶಿಸಿರುವುದಾಗಿ ಇಂದು ಘೋಷಿಸಿದೆ. ಕಳೆದ 60 ವರ್ಷಗಳಿಂದ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಕಂಪನಿಯು ಅದಕ್ಕೆ ಸರಿಸಮನಾಗಿ, ಇದೇ ಮೊದಲ ಬಾರಿಗೆ ಕಿಚನ್ ಅಪ್ಲೆಯನ್ಸ್ ಹೊರತುಪಡಿಸಿದ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿದೆ. ಪ್ರಸ್ತುತ ಗೃಹ ಶುದ್ಧೀಕರಣ ಕ್ಷೇತ್ರವು ಸುಮಾರು 2500 ಕೋಟಿ ರೂ. ಗಳಷ್ಟು ವಹಿವಾಟು ಮಾಡುವಷ್ಟು ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ವರ್ಷದಿಂದ ವರ್ಷಕ್ಕೆ 15ರಿಂದ20 ಶೇ. ದಷ್ಟು ಅಭಿವೃದ್ಧಿಯನ್ನು ಕಾಣುತ್ತಿದೆ. 
ಪ್ರೆಸ್ಟೀಜ್ ಕ್ಲೀನ್ ಹೋಮ್ ಹೆಸರಿನಡಿ ಈ ಹೊಸ ಯೋಜನೆಯನ್ನು ಅನಾವರಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಎನ್ನುವಂತೆ ಎಲೆಕ್ಟ್ರಿಕ್ ಮೋಪ್, ವ್ಯಾಕ್ಯೂಮ್ ಕ್ಲೀನರ್ ಕಂ ಫೆÇ್ಲೀರ್ ಪಾಲಿಶರ್, ಬಹೂಪಯೋಗಿ ಸ್ಟೀಮ್ ಕ್ಲೀನರ್ ಇತ್ಯಾದಿ ವಿಭಿನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಗೃಹ ಶುದ್ಧೀಕರಣ ವಿಭಾಗ ಹಾಗೂ ಕಿಚನ್ ಅಪ್ಲೆಯನ್ಸ್‍ಗಳು ಭಾರತೀಯ ಗೃಹಿಣಿಯರ ಬೆನ್ನೆಲುಬು ಅಥವಾ ಹಿತೈಷಿಯಾಗಿದ್ದು, ದೇಶದ ಲಕ್ಷಗಟ್ಟಲೆ ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸುವ ಸಂಭಾವ್ಯ ಅವಕಾಶವನ್ನು ಹೊಂದಿದೆ. 
ಟಿಟಿಕೆ ಸಮೂಹಗಳ ಅಧ್ಯಕ್ಷರಾದ ಶ್ರೀ ಟಿ ಟಿ ಜಗನ್ನಾಥನ್ ಅವರು ಮಾತನಾಡಿ ``ಟಿಟಿಕೆ ಪ್ರೆಸ್ಟೀಜ್ ಎಲ್ಲ ಭಾರತೀಯರ ಅಡುಗೆ ಮನೆಯ ಆಸ್ತಿಯಾಗಿದೆ. ಭಾರತದ ಬೃಹತ್ ಕಿಚನ್ ಅಪ್ಲೆಯನ್ಸ್ ಕಂಪನಿಯಾಗಿ, ನಾವು 60 ವರ್ಷಗಳ ಇತಿಹಾಸವನ್ನು ಹೊಂದಿದ್ದು, ನಾನಾ ಆವಿಷ್ಕಾರ ಹಾಗೂ ಹೊಸತನಗಳ ಮೂಲಕ ದೇಶದ ಬಹುಪಾಲು ಜನರ ಆಯ್ಕೆಯ ಬ್ರಾಂಡ್ ಆಗಿ ಹೊರಹೊಮ್ಮಿದ್ದೇವೆ. ಹೀಗಾಗಿ ಇದು ನಮಗೆ ಸಕಾಲವಾಗಿದ್ದು, ಗೃಹ ಶುದ್ಧೀಕರಣ ಕ್ಷೇತ್ರಕ್ಕೆ ಪ್ರವೇಶ ಮಾಡುವ ಮೂಲಕ ನಮ್ಮ ಹೆಜ್ಜೆಯಲ್ಲಿ ಒಂದಡಿ ಮುಂದೆ ಇಡುತ್ತಿದ್ದೇವೆ. ಅಡುಗೆ ಮನೆ ನಿರ್ವಹಣೆ ಮಾಡುವವರಿಗೆ ಇನ್ನಷ್ಟು ಮೌಲ್ಯವರ್ಧಿತ ಉತ್ಪನ್ನಗಳನ್ನು ನೀಡುವುದೇ ನಮ್ಮ ಗುರಿಯಾಗಿದ್ದು, ಅತ್ಯುತ್ತಮ ಗುಣಮಟ್ಟದ ಗೃಹ ಶುದ್ಧೀಕರಣ ಉತ್ಪನ್ನಗಳನ್ನು ಒದಗಿಸುವ ಮೂಲಕ ಈ ಕ್ಷೇತ್ರದಲ್ಲೂ ಮೊದಲ ಸ್ಥಾನವನ್ನು ಪಡೆಯುವಂಥ ನಿರೀಕ್ಷೆಯನ್ನು ಹೊಂದಿದ್ದೇವೆ," ಎಂದು ಹೇಳಿದರು. 
ಸೋರ್ಸಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ, ಗುಣಮಟ್ಟ ಮತ್ತು ಮಾರಾಟ ಹಾಗೂ ಮಾರ್ಕೆಟಿಂಗ್ ಸೇರಿದಂತೆ 50ಕ್ಕೂ ಹೆಚ್ಚು ವೃತ್ತಿಪರ ತಂಡವು ಹೊಸ ವಿಭಾಗದಲ್ಲಿ ಛಾಪು ಮೂಡಿಸುವುದಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. 571 ಸ್ಮಾರ್ಟ್ ಕಿಚನ್ ಸ್ಟೋರ್ ಸೇರಿದಂತೆ ದೇಶದ 50,000ಕ್ಕಿಂತಲೂ ಹೆಚ್ಚು ರಿಟೇಲ್ ಸ್ಟೋರ್‍ಗಳಲ್ಲಿ ಈ ಗೃಹ ಶುದ್ಧೀಕರಣ ವಸ್ತುಗಳು ಲಭ್ಯವಿರಲಿದೆ. ಅದೇ ರೀತಿ ಪ್ರಮುಖ ಇ ಕಾಮರ್ಸ್ ಸ್ಟೋರ್‍ಗಳಲ್ಲೂ ಸಿಗಲಿದೆ. ಪ್ರಸ್ತುತ ಬೆಂಗಳೂರು, ಚೆನ್ನೈ, ದೆಲ್ಲಿಯಲ್ಲಿ ಈ ವಸ್ತುಗಳನ್ನು ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಡಲಾಗಿದೆ. ಪ್ರೆಸ್ಟೀಜ್ ಕ್ಲೀನ್ ಹೋಮ್ ಮುಂದಿನ ವರ್ಷದಲ್ಲಿ ಕಂಪನಿಯ ಒಟ್ಟು ಆದಾಯದಲ್ಲಿ 5ಶೇ. ರಷ್ಟು ಗಳಿಕೆ ಮಾಡಲಿದೆ. 
ಪ್ರೆಸ್ಟೀಜ್ ಕ್ಲೀನ್ ಹೋಮ್‍ನಲ್ಲಿ ಎಲೆಕ್ಟ್ರಿಕ್, ನಾನ್ ಎಲೆಕ್ಟ್ರಿಕ್ ಶ್ರೇಣಿಯಲ್ಲಿ ಹೊಸ ಆವಿಷ್ಕಾರದ ನೆಲ, ಗಾಳಿ ಮತ್ತು ನೀರಿನ ರಕ್ಷಣೆಯ ಉತ್ಪನ್ನಗಳನ್ನು ಹೊಂದಿದ್ದು, ಬಳಸುವುದಕ್ಕೆ ಅತ್ಯಂತ ಸುಲಭವಾಗಿದೆ. ಎಲೆಕ್ಟ್ರಿಕ್ ಮೋಪ್ಸ್, ವ್ಯಾಕ್ಯೂಮ್ ಕ್ಲೀನರ್, ಫೆÇ್ಲೀರ್ ಪಾಲೀಶರ್, ಸ್ಟೀಮ್ ಕ್ಲೀನರ್, ಏರ್ ಫ್ಯೂರಿಫೈಯರ್‍ಗಳು ಎಲೆಕ್ಟ್ರಿಕ್ ವಿಭಾಗದಲ್ಲಿದೆ. ಅಂತೆಯೇ ನಾನ್ ಎಲೆಕ್ಟ್ರಿಕ್ ವಿಭಾಗದಲ್ಲಿ ಸ್ಟಿಕ್ ಮೋಪ್ಸ್, ಟ್ವಿಸ್ಟರ್ ಮೋಪ್, ಸ್ಕ್ವೀಸ್ ಮೋಪ್, ಮ್ಯಾಜಿಕ್ ಮೋಪ್ಸ್, ಸ್ಪ್ರೇ ಮೋಪ್ಸ್, ಲ್ಯಾಡರ್ಸ್ ಹಾಗೂ ಫ್ಲಿಪ್ ಬಿನ್‍ಗಳಿವೆ. 
ಪ್ರಸ್ತುತ ಗೃಹ ಶುದ್ಧೀಕರಣಕ್ಕೆ ಬಳಸುವಂಥ ಪದ್ಧತಿಗಳಲ್ಲಿರುವ ತೊಂದರೆಗಳನ್ನು ನಿವಾರಿಸುವ ರೀತಿಯಲ್ಲಿ ಈ ಎಲ್ಲ ಶ್ರೇಣಿಯ ಉತ್ಪನ್ನಗಳನ್ನು ತಯಾರಿಸಲಾಗಿದ್ದು, ಶುಚಿ ಮಾಡುವ ಪ್ರಕ್ರಿಯೆಯನ್ನು ಹೆಚ್ಚು ನಿರ್ಮಲ ಹಾಗೂ ಸಮರ್ಥವಾಗಿಸುತ್ತದೆ. ಭಾರತದಲ್ಲಿ ಮನೆಯ ಸ್ವಚ್ಛತೆ ಮಾಡುವ ರೀತಿಯನ್ನು ಪ್ರೆಸ್ಟೀಜ್ ಕ್ಲೀನ್ ರೂಪಾಂತರಗೊಳಿಸುತ್ತದೆ ಹಾಗೂ ಧೂಳು ಹಾಗೂ ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ ಅಲರ್ಜಿ ಹಾಗೂ ಇನ್ನಿತ್ಯಾದಿ ಸಮಸ್ಯೆಗಳಿಂದ ಮುಕ್ತಿ ಒದಗಿಸಿ ಆರೋಗ್ಯವನ್ನು ಒದಗಿಸುತ್ತದೆ. ಸುಂದರ ವಿನ್ಯಾಸ ಹಾಗೂ ಉತ್ಪನ್ನಗಳು ಹೊಂದಿರುವ ದಕ್ಷತೆಯ ಅಂಶಗಳು ಬಳಕೆದಾರರಿಗೆ ಗರಿಷ್ಠ ಆರಾಮದಾಯಕತೆಯನ್ನು ಒದಗಿಸುತ್ತದೆ. 
ಟಿಟಿಕೆ ಪ್ರೆಸ್ಟೀಜ್‍ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಚಂದ್ರು ಕಾಲ್ರೋ ಅವರು ಮಾತನಾಡಿ “ಭಾರತೀಯರು ಅಡುಗೆ ಮಾಡುವ ವಿಧಾನವನ್ನು ಬದಲಾಯಿಸಿದ ಬಳಿಕ, ಭಾರತೀಯರು ಸ್ವಚ್ಛಗೊಳಿಸುವ ವಿಧಾನವನ್ನು ಬದಲಾಯಿಸಿಕೊಳ್ಳುವಲ್ಲಿ ಬದ್ಧರಾದೆವು. ಭಾರತದಲ್ಲಿ ಮನೆಗಳನ್ನು ಸ್ವಚ್ಛಗೊಳಿಸುವ ವಿಧಾನವನ್ನು ಬದಲಾಯಿಸುವಂಥ ಉನ್ನತ ಗುಣಮಟ್ಟದ ಉತ್ಪನ್ನಗಳ ಶ್ರೇಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಅಗತ್ಯವಿದೆ. ಆರೋಗ್ಯ, ಅನುಕೂಲ ಮತ್ತು ಆಧುನಿಕ ಜೀವನ ಶೈಲಿಯು ಮನೆ ಸ್ವಚ್ಚಗೊಳಿಸುವ ಹೊಸ ವಿಧಾನವನ್ನು ಬೇಡುತ್ತದೆ. ಈ ಒಂದು ವಿಚಾರವನ್ನು ದೇಶದ ಇತರೆ ಯಾವುದೆ ಬ್ರಾಂಡ್ ಸಮಗ್ರವಾಗಿ ಅರ್ಥ ಮಾಡಿಕೊಂಡಿಲ್ಲ. ಈಗ ನಮ್ಮ ಗ್ರಾಹಕರಿಗೆ ಹೊಸ ಮಟ್ಟದ ಅನುಕೂಲತೆ ಮತ್ತು ಆಯ್ಕೆಗಳನ್ನು ಒದಗಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ,’’ ಎಂದರು.
ಟಿಟಿಕೆ ಪ್ರೆಸ್ಟೀಜ್ ಬಗ್ಗೆ
ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್ ಸಂಸ್ಥೆಯು ಟಿಟಿಕೆ ಸಮೂಹದ ಒಂದು ಭಾಗವಾಗಿದೆ. ಕಳೆದ ಆರು ದಶಕಗಳಿಂದ ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್ ಭಾರತದ ಅತಿದೊಡ್ಡ ಕಿಚನ್ ಅಪ್ಲೆಯನ್ಸ್ ಕಂಪನಿಯಾಗಿ ಹೊರ ಹೊಮ್ಮಿದ್ದು, ದೇಶಾದ್ಯಂತ ಗೃಹಣಿಯರ ಅಗತ್ಯಗಳನ್ನು ಪೂರೈಸುತ್ತಿದೆ. ಪ್ರೆಸ್ಟೀಜ್‍ನ ಪ್ರತಿಯೊಂದು ಬ್ರಾಂಡ್ ಅನ್ನು ಸುರಕ್ಷತೆ, ನಾವೀನ್ಯತೆ, ಬಾಳಿಕೆ ಮತ್ತು ನಂಬಿಕೆಯ ಆಧಾರ ಸ್ಥಂಭದಲ್ಲಿ ನಿರ್ಮಿಸಲಾಗಿದೆ. ಆ ಮೂಲಕ ನಮ್ಮ ಬ್ರಾಂಡ್ ಲಕ್ಷಾಂತರ ಮನೆಗಳಲ್ಲಿ ಮೊದಲ ಆಯ್ಕೆಯಾಗಿದೆ.