Tuesday, May 03, 2016

‘ಗ್ರಾಮೀಣ ಅಂಗಡಿ’ಯಲ್ಲಿ ಕಿರುಧಾನ್ಯಗಳ ಪ್ರದರ್ಶನ ಮತ್ತು ಮಾರಾಟ

ಗ್ರಾಮೀಣ ಅಂಗಡಿ (ಗ್ರಾಮೀಣ ಕರಕುಶಲ ಉದ್ಯಮದ ಘಟಕ) ಯಿಂದ “ಉತ್ತಮ ಆರೊಗ್ಯಕ್ಕಾಗಿ ಆಹಾರ- ಆಹಾರಕ್ಕಾಗಿ ಕಿರುಧಾನ್ಯಗಳು” ಎಂಬ ಘೋಷಣೆಯಡಿ ರಾಜಾಜಿನಗರ ಮತ್ತು ಜಯನಗರದಲ್ಲಿರುವ ಗ್ರಾಮೀಣ ಅಂಗಡಿಯಲ್ಲಿ ಕಿರುಧಾನ್ಯಗಳ ಪ್ರದರ್ಶನ ಮತ್ತು ಮಾರಾಟವನ್ನು ಏಪ್ರಿಲ್ 4, 2016 ರಿಂದ ಆರಂಭಿಸಲಾಗಿದೆ.

ಪ್ರದರ್ಶನದಲ್ಲಿ ಜೋಳ, ಸಜ್ಜೆ, ನವಣೆ, ಸಾಮೆ, ಆರ್ಕ, ರಾಗಿ, ಊದಲು, ಬರಗು, ಜವೆ, ಗೋದಿ, ಉದ್ದನೆಯ ತಳಿಯ ಅಕ್ಕಿ ಮುಂತಾದ ಶ್ರೇಷ್ಠ ಆಹಾರ ಧಾನ್ಯಗಳು ‘ಗ್ರಾಮೀಣ ಅಂಗಡಿ’ ಯಲ್ಲಿ ದೊರೆಯಲಿವೆ. ಈಗಾಗಲೇ ಗ್ರಾಮೀಣ ಕರಕುಶಲ ಉತ್ಪನ್ನಗಳು ಮತ್ತು ಕೈಮಗ್ಗ ಮತ್ತು ಖಾದಿ ಉತ್ಪನ್ನ ಮಾಡುವ ಕರಕುಶಲ ಕರ್ಮಿಗಳ ಸಬಲೀಕರಣಕ್ಕಾಗಿ ಮಾರುಕಟ್ಟೆ ವ್ಯವಸ್ಥೆ ಮಾಡುತ್ತಿರುವ “ಗ್ರಾಮೀಣ ಅಂಗಡಿ” ಯಲ್ಲಿ ಈಗ ಕಿರುಧಾನ್ಯಗಳು ಮತ್ತು ಸಾವಯವ ತರಕಾರಿಗಳನ್ನು ನಗರದ ಜನತೆಗೆ ದೊರೆಯುವಂತೆ ಮಾಡಲಾಗಿದೆ.

ಆರೋಗ್ಯಕ್ಕೆ ಮಾರಕವಾಗುವ ಒಂದೇ ತೆರನಾದ ಮೈದಾ ಹಿಟ್ಟಿನಿಂದ ತಯಾರಾಗುವ ಪಿಜ್ಝಾ, ಬರ್ಗರ್, ಬ್ರೆಡ್, ಕೇಕ್, ಕೊಕಾ ಕೋಲಾ, ಪೆಪ್ಸಿ, ಮುಂತಾದ ಅತಿಯಾದ ರಸಾಯನಗಳು ಮತ್ತು ಪ್ರಚೋದಕ ಆಹಾರ ಪದಾರ್ಥಗಳನ್ನು ಬಳಸುವ ಬದಲಿಗೆ ನಮ್ಮ ದೇಹಕ್ಕೆ ಬೇಕಾದ ನಾರು, ಪಿಷ್ಟ, ಪೌಷ್ಠಿಕಾಂಶಗಳ್ಳುಳ ಕಿರು ಆಹಾರ ಧಾನ್ಯಗಳನ್ನು ಉಪಯೋಗಿಸಬೇಕೆಂದು ಗ್ರಾಮಿಣ ಅಂಗಡಿ ಬಳಗ ಜನತೆಯಲ್ಲಿ ಮನವಿ ಮಾಡುತ್ತದೆ.

ಪ್ರದರ್ಶನ ಮತ್ತು ಮಾರಾಟ: ರಾಜಾಜಿನಗರ: ನಂ. 299/45, 10ನೇ ಮುಖ್ಯ ರಸ್ತೆ, 4ನೇ ಬ್ಲಾಕ್, (ರಾಮ ಮಂದಿರದ ಹಿಂಭಾಗ, ಕೆನರಾ ಬ್ಯಾಂಕ್ ಎದುರು) ರಾಜಾಜಿನಗರ, ಬೆಂಗಳೂರು- 5600010,  ಪೋನ್ 080-23404727, ಜಯನಗರ: ಗ್ರಾಮೀಣ ಅಂಗಡಿ, ನಂ8, 11ನೇ ಮುಖ್ಯ ರಸ್ತೆ, 39ನೇ ಎ ಕ್ರಾಸ್, 4ನೇ ಟಿ ಬ್ಲಾಕ್, ಶ್ಯಾಲಿನಿ ಮೈದಾನದ ಹತ್ತಿರ, ಜಯನಗರ ಬೆಂಗಳೂರು-560048, ಪೋನ್ ನಂ. 080-22441835,ಮೊ: 9448324727

No comments:

Post a Comment