Tuesday, May 03, 2016

ಎಂಟಿಆರ್ ಫುದ್ಶ್‌ಗೆ ಹೊಸ ಬ್ರಾಂಡ್ ಗುರುತು

ಬೆಂಗಳೂರು, ಮೇ 3, 2016: ಯುವ ಸಮೂಹವನ್ನು ಗುರಿಯಾಗಿಟ್ಟುಕೊಂಡು ಎಂಟಿಆರ್ ಫುಡ್ಸ್ ಪ್ರೈ ಲಿ. ಸಂಸ್ಥೆ ಹೊಸ ಬ್ರಾಂಡ್ ಗುರುತು ಮತ್ತು ಸಮಕಾಲೀನ ಪ್ರಜ್ಞೆಯನ್ನು ಪ್ರತಿಬಿಂಬಿಸುವ ಲೋಗೋವನ್ನು ಬಿಡುಗಡೆ ಮಾಡಿದೆ. ಸಂಸ್ಥೆಯ ರೀ ಬ್ರಾಂಡಿಂಗ್ ಪ್ರಕ್ರಿಯೆ ಸಕ್ರಿಯ ಗ್ರಾಹಕರನ್ನು ತಲುಪುವ ಉದ್ದೇಶ ಹೊಂದಿದೆ. ಹೊಸ ಲೋಗೊ ಮತ್ತು ಪ್ಯಾಕೇಜಿಂಗ್ ತಕ್ಷಣವೇ ಜಾರಿಗೆ ಬರಲಿದೆ. ಮೇ ತಿಂಗಳಲ್ಲಿಯೇ ಹೊಸ ಪ್ಯಾಕ್‍ಗಳು ಮಾರುಕಟ್ಟೆಗೆ ಬರಲಿವೆ.
ಕಳೆದ ಕೆಲವು ವರ್ಷಗಳಿಂದ ಗ್ರಾಹಕರ ಸ್ವಭಾವದಲ್ಲಿ ಸಾಕಷ್ಟು ಬದಲಾವಣೆಗೊಂಡಿವೆ. ಇದಕ್ಕೆ ಪೂರಕವಾಗಿ ಕಂಪೆನಿಯ ಬ್ರಾಂಡ್ ಪೊಸಿಷನಿಂಗ್ ಸಹ ಬದಲಾಗಬೇಕೆಂಬ ಉದ್ದೇಶದಿಂದ ರೀಬ್ರಾಂಡಿಂಗ್ ಮಾಡಲಾಗಿದೆ. ಗ್ರಾಹಕರ ಅಗತ್ಯತೆ ಮತ್ತು ಬಯಕೆಗಳನ್ನು ಗಮನದಲ್ಲಿಟ್ಟುಕೊಂಡು ಎಂಟಿಆರ್ ಫುಡ್ಸ್ ಕಳೆದ ಮೂರು ವರ್ಷಗಳಲ್ಲಿ 44 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.
ಅಭಿವೃದ್ಧಿ ಕಾರ್ಯತಂತ್ರದ ಭಾಗವಾಗಿ ಕಂಪೆನಿಯು ತನ್ನ ಹೊಸ ಇ ವಾಣಿಜ್ಯ ತಾಣವನ್ನೂ ಆರಂಭಿಸಿದ್ದು ಇಲ್ಲಿ ಕಂಪೆನಿಯ 140ಕ್ಕೂ ಹೆಚ್ಚು ಉತ್ಪನ್ನಗಳನ್ನು ಗ್ರಾಹಕರು ನೇರವಾಗಿ ಆಯ್ಕೆ ಮಾಡಿ ಖರೀದಿಸಬಹುದು.
ರೀಬ್ರಾಂಡಿಂಗ್‍ನ ಅಗತ್ಯತೆಯನ್ನು ಒತ್ತಿ ಹೇಳಿದ ಎಂಟಿಆರ್ ಫುಡ್ಸ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಶರ್ಮ ಅವರು “ಇಂದಿನ ಗ್ರಾಹಕರು ಬದಲಾಗುತ್ತಿದ್ದಾರೆ. ಅವರ ಆಹಾರ ಅಗತ್ಯತೆಗಳು ಮತ್ತು ಬಳಕೆಯ ರೀತಿಯೂ ಬದಲಾಗುತ್ತಿದೆ. ಅವರು ಭಾರತೀಯ ಆಹಾರವನ್ನು ಇಷ್ಟಪಡುತ್ತಾರೆ. ಆದರೆ ಇದರ ಸಿದ್ಧತೆ ತೀರಾ ಕಷ್ಟ ಮತ್ತು ಸಮಯ ತೆಗೆದುಕೊಳ್ಳುತ್ತದೆ ಎಂದು ಭಾವಿಸುತ್ತಾರೆ. ನಮ್ಮ ಬ್ರಾಂಡ್ ಹೊಸ ಬಗೆಯದ್ದಾಗಿದ್ದು, ಬಳಸಲು ಸುಲಭವಾದ, ಪೌಷ್ಠಿಕವಾದ ಮತ್ತು ಅಪ್ಪಟ ರುಚಿಯ ಉತ್ಪನ್ನಗಳು ನಮ್ಮಲ್ಲಿವೆ ಎಂಬುದನ್ನು ಪ್ರಚುರಪಡಿಸುತ್ತದೆ. ಗ್ರಾಹಕರಿಗೆ ಭಾರತೀಯ ಆಹಾರ ಸುಲಭವಾಗಿ, ಸಮಯದ ಪ್ರಶ್ನೆಯಿಲ್ಲದೇ ದೊರೆಯುವಂತೆ ಮಾಡುವ ಪ್ರಯತ್ನ ಮಾಡುತ್ತದೆ” ಎಂದರು.
ಒಂದು ಬ್ರಾಂಡ್ ಆಗಿ ಇಂದು ನಾವು ಬದಲಾದ ನಮ್ಮ ಮುಖ್ಯ ಗ್ರಾಹಕರಿಗೆ ತಕ್ಕಂತೆ ಬದಲಾಗಬೇಕಾಗಿತ್ತು. ಹೊಸ ಬ್ರಾಂಡ್ ಗುರುತು ಇಂದು ಕಂಪೆನಿಯಿರುವ ಸ್ಥಾನವನ್ನು ಪ್ರತಿನಿಧಿಸುತ್ತದೆ. ನಮ್ಮ ವಿವರವಾದ ಅಭಿವೃದ್ಧಿ ಕಾರ್ಯತಂತ್ರ ಮುಂದಿನ ಭವಿಷ್ಯಕ್ಕೆ ಎಂಟಿಆರ್ ಸಿದ್ಧವಾಗಿದೆ ಎಂಬುದನ್ನು ಶ್ರುತಪಡಿಸುತ್ತದೆ. ಎಂಟಿಆರ್ ಫುಡ್ಸ್‍ಗೆ ಇದು ಹೊಸ ಆರಂಭ. ಈ ಬದಲಾಔಣೆಗಳು ಮತ್ತು ನಮ್ಮ ಹೊಸ ಬ್ರಾಂಡ್ ಗುರುತು ನಮ್ಮ ಗ್ರಾಹಕರ ಪ್ರತಿನಿತ್ಯದ ಭಾಗವಾಗಿ ನಮ್ಮನ್ನು ಮಾಡಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ ಎಂದು ಹೇಳಿದರು.
ಓಕ್ರ್ಲಾ ಫುಡ್ಸ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯಕಾರಿ ಉಪಾಧ್ಯಕ್ಷರಾದ ಆಟ್ಲೆ ವಿದಾರ್ ಮಾತನಾಡಿ ‘ಕಳೆದ ಮೂರು ವರ್ಷಗಳಲ್ಲಿ ಓಕ್ರ್ಲಾ ಫುಡ್ಸ್ ಒಂದು ಪ್ರಮುಖ ನೋರ್ಡಿಕ್ ಬ್ರಾಂಡೆಡ್ ಗ್ರಾಹಕ ಕಂಪೆನಿಯಾಗಿ ಪವಿರ್ತನೆಗೊಂಡಿದೆ. ಇದು ಎಂಟಿಆರ್ ಫುಡ್ಸ್‍ನ ಬೆಳವಣಿಗೆಯಲ್ಲಿ ಸಕಾರಾತ್ಮಕ ಪಾಲುದಾರಿಕೆಯ ಪಾತ್ರ ವಹಿಸಲಿದೆ. ಎಂಟಿಆರ್‍ನಂಥ ಬ್ರಾಂಡ್‍ನ ಮಾಲೀಕರು ನಾವೆನ್ನುವುದಕ್ಕೆ ನಮಗೆ ಹೆಮ್ಮೆ ಇದೆ. ಈ ಬ್ರಾಂಡ್‍ನ ಬೆಳವಣಿಗೆ ಮತ್ತು ಗ್ರಾಹಕರ ಒಳನೋಟಕ್ಕೆ ಅನುಗುಣವಾಗಿ ಅದರ ಸುಲಲಿತ ಪರಿವರ್ತನೆಯಲ್ಲಿ ನಾವೂ ಕೊಡುಗೆ ನೀಡುತ್ತೇವೆ. ಹೊಸ ಬ್ರಾಂಡ್ ಗುರುತಿನ ಆರಂಭ ನಮ್ಮ ಪಾಲುದಾರಿಕೆ ಮತ್ತು ಜಂಟಿ ಅಭಿವೃದ್ಧಿಯ ಹಾದಿಯ ಹೆಗ್ಗುರುತಾಗಿದೆ” ಎಂದು ನುಡಿದರು.

No comments:

Post a Comment