Thursday, April 28, 2016

ಗೃಹ ಶುದ್ಧೀಕರಣ ಮಾರುಕಟ್ಟೆ ಪ್ರವೇಶಿಸಿದ ಟಿಟಿಕೆ ಪ್ರೆಸ್ಟೀಜ್


ಮನೆ ಸ್ವಚ್ಛಗೊಳಿಸುವ ನವನವೀನ ಉತ್ಪನ್ನಗಳ ಶ್ರೇಣಿಗಳನ್ನು ಹೊಂದಿರುವ ಹೊಸ ಪ್ರೆಸ್ಟೀಜ್ ಕ್ಲೀನ್‍ಹೋಮ್ ಬಿಡುಗಡೆ  
• ದಶಕಗಳ ಕಾಲ ಭಾರತದ ಅಡುಗೆಮನೆಗಳಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದ ಬಳಿಕ ಮೊದಲ ಬಾರಿಯ ವಿಸ್ತರಣೆ 
• ಮೂಲ ಗ್ರಾಹಕರೆಡೆಗಿನ ಗಮನ ಮುಂದುವರಿಕೆ- ಭಾರತೀಯ ಗೃಹಿಣಿಯರು, ಸುಮಾರು 60 ವರ್ಷಗಳಿಂದ ಪೋಷಿಸಲ್ಪಟ್ಟಿರುವ ಸಂಬಂಧ

• 2016-17ರ ವಿತ್ತೀಯ ವರ್ಷದಲ್ಲಿ ಸಂಸ್ಥೆಯ ಆದಾಯದ ಶೇ. 5ರಷ್ಟು ಹೊಸ ಯೋಜನೆಯಿಂದ ಗಳಿಸುವ ನಿರೀಕ್ಷೆ. 
• ಏಕಕಾಲದಲ್ಲಿ ಗುಡಿಸುವ, ಒರೆಸುವ ಹಾಗೂ ಉಜ್ಜುವ ವಿಶ್ವದ ಮೊದಲ ದೇಶೀಯ ಎಲೆಕ್ಟ್ರಿಕ್ ಮೋಪ್, ವ್ಯಾಕ್ಯೂಮ್ ಕ್ಲೀನರ್ ಕಂ ಫ್ಲೋರ್ ಪಾಲಿಶರ್ ಮತ್ತು ಬಹೂಪಯೋಗಿ ಸ್ಟೀಮ್ ಕ್ಲೀನರ್ ಈ ನವನವೀನ ಉತ್ಪನ್ನಗಳ ಶ್ರೇಣಿಯಲ್ಲಿ ಒಳಗೊಂಡಿದೆ.

ಬೆಂಗಳೂರು, ಏಪ್ರಿಲ್ 28,2016: ಭಾರತದ ಬೃಹತ್ ಕಿಚನ್ ಹೋಮ್ ಅಪ್ಲೆಯನ್ಸ್ ಬ್ರಾಂಡ್ ಆಗಿರುವ ಟಿಟಿಕೆ ಪ್ರೆಸ್ಟೀಜ್, ಭಾರತೀಯ ಅಡುಗೆ ಮನೆ ಶುದ್ಧೀಕರಣ ಮಾರುಕಟ್ಟೆಗೆ(ಹೋಮ್ ಕ್ಲೀನಿಂಗ್ ಮಾರ್ಕೇಟ್) ಪ್ರವೇಶಿಸಿರುವುದಾಗಿ ಇಂದು ಘೋಷಿಸಿದೆ. ಕಳೆದ 60 ವರ್ಷಗಳಿಂದ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಕಂಪನಿಯು ಅದಕ್ಕೆ ಸರಿಸಮನಾಗಿ, ಇದೇ ಮೊದಲ ಬಾರಿಗೆ ಕಿಚನ್ ಅಪ್ಲೆಯನ್ಸ್ ಹೊರತುಪಡಿಸಿದ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿದೆ. ಪ್ರಸ್ತುತ ಗೃಹ ಶುದ್ಧೀಕರಣ ಕ್ಷೇತ್ರವು ಸುಮಾರು 2500 ಕೋಟಿ ರೂ. ಗಳಷ್ಟು ವಹಿವಾಟು ಮಾಡುವಷ್ಟು ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ವರ್ಷದಿಂದ ವರ್ಷಕ್ಕೆ 15ರಿಂದ20 ಶೇ. ದಷ್ಟು ಅಭಿವೃದ್ಧಿಯನ್ನು ಕಾಣುತ್ತಿದೆ. 
ಪ್ರೆಸ್ಟೀಜ್ ಕ್ಲೀನ್ ಹೋಮ್ ಹೆಸರಿನಡಿ ಈ ಹೊಸ ಯೋಜನೆಯನ್ನು ಅನಾವರಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಎನ್ನುವಂತೆ ಎಲೆಕ್ಟ್ರಿಕ್ ಮೋಪ್, ವ್ಯಾಕ್ಯೂಮ್ ಕ್ಲೀನರ್ ಕಂ ಫೆÇ್ಲೀರ್ ಪಾಲಿಶರ್, ಬಹೂಪಯೋಗಿ ಸ್ಟೀಮ್ ಕ್ಲೀನರ್ ಇತ್ಯಾದಿ ವಿಭಿನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಗೃಹ ಶುದ್ಧೀಕರಣ ವಿಭಾಗ ಹಾಗೂ ಕಿಚನ್ ಅಪ್ಲೆಯನ್ಸ್‍ಗಳು ಭಾರತೀಯ ಗೃಹಿಣಿಯರ ಬೆನ್ನೆಲುಬು ಅಥವಾ ಹಿತೈಷಿಯಾಗಿದ್ದು, ದೇಶದ ಲಕ್ಷಗಟ್ಟಲೆ ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸುವ ಸಂಭಾವ್ಯ ಅವಕಾಶವನ್ನು ಹೊಂದಿದೆ. 
ಟಿಟಿಕೆ ಸಮೂಹಗಳ ಅಧ್ಯಕ್ಷರಾದ ಶ್ರೀ ಟಿ ಟಿ ಜಗನ್ನಾಥನ್ ಅವರು ಮಾತನಾಡಿ ``ಟಿಟಿಕೆ ಪ್ರೆಸ್ಟೀಜ್ ಎಲ್ಲ ಭಾರತೀಯರ ಅಡುಗೆ ಮನೆಯ ಆಸ್ತಿಯಾಗಿದೆ. ಭಾರತದ ಬೃಹತ್ ಕಿಚನ್ ಅಪ್ಲೆಯನ್ಸ್ ಕಂಪನಿಯಾಗಿ, ನಾವು 60 ವರ್ಷಗಳ ಇತಿಹಾಸವನ್ನು ಹೊಂದಿದ್ದು, ನಾನಾ ಆವಿಷ್ಕಾರ ಹಾಗೂ ಹೊಸತನಗಳ ಮೂಲಕ ದೇಶದ ಬಹುಪಾಲು ಜನರ ಆಯ್ಕೆಯ ಬ್ರಾಂಡ್ ಆಗಿ ಹೊರಹೊಮ್ಮಿದ್ದೇವೆ. ಹೀಗಾಗಿ ಇದು ನಮಗೆ ಸಕಾಲವಾಗಿದ್ದು, ಗೃಹ ಶುದ್ಧೀಕರಣ ಕ್ಷೇತ್ರಕ್ಕೆ ಪ್ರವೇಶ ಮಾಡುವ ಮೂಲಕ ನಮ್ಮ ಹೆಜ್ಜೆಯಲ್ಲಿ ಒಂದಡಿ ಮುಂದೆ ಇಡುತ್ತಿದ್ದೇವೆ. ಅಡುಗೆ ಮನೆ ನಿರ್ವಹಣೆ ಮಾಡುವವರಿಗೆ ಇನ್ನಷ್ಟು ಮೌಲ್ಯವರ್ಧಿತ ಉತ್ಪನ್ನಗಳನ್ನು ನೀಡುವುದೇ ನಮ್ಮ ಗುರಿಯಾಗಿದ್ದು, ಅತ್ಯುತ್ತಮ ಗುಣಮಟ್ಟದ ಗೃಹ ಶುದ್ಧೀಕರಣ ಉತ್ಪನ್ನಗಳನ್ನು ಒದಗಿಸುವ ಮೂಲಕ ಈ ಕ್ಷೇತ್ರದಲ್ಲೂ ಮೊದಲ ಸ್ಥಾನವನ್ನು ಪಡೆಯುವಂಥ ನಿರೀಕ್ಷೆಯನ್ನು ಹೊಂದಿದ್ದೇವೆ," ಎಂದು ಹೇಳಿದರು. 
ಸೋರ್ಸಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ, ಗುಣಮಟ್ಟ ಮತ್ತು ಮಾರಾಟ ಹಾಗೂ ಮಾರ್ಕೆಟಿಂಗ್ ಸೇರಿದಂತೆ 50ಕ್ಕೂ ಹೆಚ್ಚು ವೃತ್ತಿಪರ ತಂಡವು ಹೊಸ ವಿಭಾಗದಲ್ಲಿ ಛಾಪು ಮೂಡಿಸುವುದಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. 571 ಸ್ಮಾರ್ಟ್ ಕಿಚನ್ ಸ್ಟೋರ್ ಸೇರಿದಂತೆ ದೇಶದ 50,000ಕ್ಕಿಂತಲೂ ಹೆಚ್ಚು ರಿಟೇಲ್ ಸ್ಟೋರ್‍ಗಳಲ್ಲಿ ಈ ಗೃಹ ಶುದ್ಧೀಕರಣ ವಸ್ತುಗಳು ಲಭ್ಯವಿರಲಿದೆ. ಅದೇ ರೀತಿ ಪ್ರಮುಖ ಇ ಕಾಮರ್ಸ್ ಸ್ಟೋರ್‍ಗಳಲ್ಲೂ ಸಿಗಲಿದೆ. ಪ್ರಸ್ತುತ ಬೆಂಗಳೂರು, ಚೆನ್ನೈ, ದೆಲ್ಲಿಯಲ್ಲಿ ಈ ವಸ್ತುಗಳನ್ನು ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಡಲಾಗಿದೆ. ಪ್ರೆಸ್ಟೀಜ್ ಕ್ಲೀನ್ ಹೋಮ್ ಮುಂದಿನ ವರ್ಷದಲ್ಲಿ ಕಂಪನಿಯ ಒಟ್ಟು ಆದಾಯದಲ್ಲಿ 5ಶೇ. ರಷ್ಟು ಗಳಿಕೆ ಮಾಡಲಿದೆ. 
ಪ್ರೆಸ್ಟೀಜ್ ಕ್ಲೀನ್ ಹೋಮ್‍ನಲ್ಲಿ ಎಲೆಕ್ಟ್ರಿಕ್, ನಾನ್ ಎಲೆಕ್ಟ್ರಿಕ್ ಶ್ರೇಣಿಯಲ್ಲಿ ಹೊಸ ಆವಿಷ್ಕಾರದ ನೆಲ, ಗಾಳಿ ಮತ್ತು ನೀರಿನ ರಕ್ಷಣೆಯ ಉತ್ಪನ್ನಗಳನ್ನು ಹೊಂದಿದ್ದು, ಬಳಸುವುದಕ್ಕೆ ಅತ್ಯಂತ ಸುಲಭವಾಗಿದೆ. ಎಲೆಕ್ಟ್ರಿಕ್ ಮೋಪ್ಸ್, ವ್ಯಾಕ್ಯೂಮ್ ಕ್ಲೀನರ್, ಫೆÇ್ಲೀರ್ ಪಾಲೀಶರ್, ಸ್ಟೀಮ್ ಕ್ಲೀನರ್, ಏರ್ ಫ್ಯೂರಿಫೈಯರ್‍ಗಳು ಎಲೆಕ್ಟ್ರಿಕ್ ವಿಭಾಗದಲ್ಲಿದೆ. ಅಂತೆಯೇ ನಾನ್ ಎಲೆಕ್ಟ್ರಿಕ್ ವಿಭಾಗದಲ್ಲಿ ಸ್ಟಿಕ್ ಮೋಪ್ಸ್, ಟ್ವಿಸ್ಟರ್ ಮೋಪ್, ಸ್ಕ್ವೀಸ್ ಮೋಪ್, ಮ್ಯಾಜಿಕ್ ಮೋಪ್ಸ್, ಸ್ಪ್ರೇ ಮೋಪ್ಸ್, ಲ್ಯಾಡರ್ಸ್ ಹಾಗೂ ಫ್ಲಿಪ್ ಬಿನ್‍ಗಳಿವೆ. 
ಪ್ರಸ್ತುತ ಗೃಹ ಶುದ್ಧೀಕರಣಕ್ಕೆ ಬಳಸುವಂಥ ಪದ್ಧತಿಗಳಲ್ಲಿರುವ ತೊಂದರೆಗಳನ್ನು ನಿವಾರಿಸುವ ರೀತಿಯಲ್ಲಿ ಈ ಎಲ್ಲ ಶ್ರೇಣಿಯ ಉತ್ಪನ್ನಗಳನ್ನು ತಯಾರಿಸಲಾಗಿದ್ದು, ಶುಚಿ ಮಾಡುವ ಪ್ರಕ್ರಿಯೆಯನ್ನು ಹೆಚ್ಚು ನಿರ್ಮಲ ಹಾಗೂ ಸಮರ್ಥವಾಗಿಸುತ್ತದೆ. ಭಾರತದಲ್ಲಿ ಮನೆಯ ಸ್ವಚ್ಛತೆ ಮಾಡುವ ರೀತಿಯನ್ನು ಪ್ರೆಸ್ಟೀಜ್ ಕ್ಲೀನ್ ರೂಪಾಂತರಗೊಳಿಸುತ್ತದೆ ಹಾಗೂ ಧೂಳು ಹಾಗೂ ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ ಅಲರ್ಜಿ ಹಾಗೂ ಇನ್ನಿತ್ಯಾದಿ ಸಮಸ್ಯೆಗಳಿಂದ ಮುಕ್ತಿ ಒದಗಿಸಿ ಆರೋಗ್ಯವನ್ನು ಒದಗಿಸುತ್ತದೆ. ಸುಂದರ ವಿನ್ಯಾಸ ಹಾಗೂ ಉತ್ಪನ್ನಗಳು ಹೊಂದಿರುವ ದಕ್ಷತೆಯ ಅಂಶಗಳು ಬಳಕೆದಾರರಿಗೆ ಗರಿಷ್ಠ ಆರಾಮದಾಯಕತೆಯನ್ನು ಒದಗಿಸುತ್ತದೆ. 
ಟಿಟಿಕೆ ಪ್ರೆಸ್ಟೀಜ್‍ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಚಂದ್ರು ಕಾಲ್ರೋ ಅವರು ಮಾತನಾಡಿ “ಭಾರತೀಯರು ಅಡುಗೆ ಮಾಡುವ ವಿಧಾನವನ್ನು ಬದಲಾಯಿಸಿದ ಬಳಿಕ, ಭಾರತೀಯರು ಸ್ವಚ್ಛಗೊಳಿಸುವ ವಿಧಾನವನ್ನು ಬದಲಾಯಿಸಿಕೊಳ್ಳುವಲ್ಲಿ ಬದ್ಧರಾದೆವು. ಭಾರತದಲ್ಲಿ ಮನೆಗಳನ್ನು ಸ್ವಚ್ಛಗೊಳಿಸುವ ವಿಧಾನವನ್ನು ಬದಲಾಯಿಸುವಂಥ ಉನ್ನತ ಗುಣಮಟ್ಟದ ಉತ್ಪನ್ನಗಳ ಶ್ರೇಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಅಗತ್ಯವಿದೆ. ಆರೋಗ್ಯ, ಅನುಕೂಲ ಮತ್ತು ಆಧುನಿಕ ಜೀವನ ಶೈಲಿಯು ಮನೆ ಸ್ವಚ್ಚಗೊಳಿಸುವ ಹೊಸ ವಿಧಾನವನ್ನು ಬೇಡುತ್ತದೆ. ಈ ಒಂದು ವಿಚಾರವನ್ನು ದೇಶದ ಇತರೆ ಯಾವುದೆ ಬ್ರಾಂಡ್ ಸಮಗ್ರವಾಗಿ ಅರ್ಥ ಮಾಡಿಕೊಂಡಿಲ್ಲ. ಈಗ ನಮ್ಮ ಗ್ರಾಹಕರಿಗೆ ಹೊಸ ಮಟ್ಟದ ಅನುಕೂಲತೆ ಮತ್ತು ಆಯ್ಕೆಗಳನ್ನು ಒದಗಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ,’’ ಎಂದರು.
ಟಿಟಿಕೆ ಪ್ರೆಸ್ಟೀಜ್ ಬಗ್ಗೆ
ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್ ಸಂಸ್ಥೆಯು ಟಿಟಿಕೆ ಸಮೂಹದ ಒಂದು ಭಾಗವಾಗಿದೆ. ಕಳೆದ ಆರು ದಶಕಗಳಿಂದ ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್ ಭಾರತದ ಅತಿದೊಡ್ಡ ಕಿಚನ್ ಅಪ್ಲೆಯನ್ಸ್ ಕಂಪನಿಯಾಗಿ ಹೊರ ಹೊಮ್ಮಿದ್ದು, ದೇಶಾದ್ಯಂತ ಗೃಹಣಿಯರ ಅಗತ್ಯಗಳನ್ನು ಪೂರೈಸುತ್ತಿದೆ. ಪ್ರೆಸ್ಟೀಜ್‍ನ ಪ್ರತಿಯೊಂದು ಬ್ರಾಂಡ್ ಅನ್ನು ಸುರಕ್ಷತೆ, ನಾವೀನ್ಯತೆ, ಬಾಳಿಕೆ ಮತ್ತು ನಂಬಿಕೆಯ ಆಧಾರ ಸ್ಥಂಭದಲ್ಲಿ ನಿರ್ಮಿಸಲಾಗಿದೆ. ಆ ಮೂಲಕ ನಮ್ಮ ಬ್ರಾಂಡ್ ಲಕ್ಷಾಂತರ ಮನೆಗಳಲ್ಲಿ ಮೊದಲ ಆಯ್ಕೆಯಾಗಿದೆ.

Friday, February 05, 2016

ಬಡ ಕುಟುಂಬದಿಂದ ಬಂದ ಆ ಸೋದರರು ’ಕ್ವಿಕ್ ಹೀಲ್’ ಕಟ್ಟಿದ ಪರಿಯಿದು

ಲೇಖನ : ಎ.ಸೀತಾರಾಮ ಶಾಸ್ತ್ರಿ
    ಇಂದು ದೇಶದೆಲ್ಲೆಡೆ  “ಮೇಕ್ ಇನ್ ಇಂಡಿಯಾ” ಘೋಷಣೆ ಮೊಳಗುತ್ತಿದೆ. ವಿದೇಶೀ ತಂತ್ರಜ್ಞಾನ ಬಳಸಿಕೊಂಡು ಅರ್ಥಾತ್ ನಕಲು ಮಾಡಿ ತಯಾರಿಸಿದ ಉತ್ಪನ್ನಗಳಿಗೂ ಮೇಕ್ ಇನ್ ಇಂಡಿಯಾ ಹಣೆಪಟ್ಟಿ ಕಟ್ಟಿ ಬೆನ್ನು ತಟ್ಟಿಕೊಳ್ಳುತ್ತಿರುವ ನೂರಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅಂತದ್ದರಲ್ಲಿ ಇಪ್ಪತ್ತು ವರ್ಷಗಳ ಹಿಂದೆಯೇ(1995), ನಮ್ಮ ದೇಶದಲ್ಲಿ ಕಂಪ್ಯೂಟರ್ ಬಳಕೆ ಆಗತಾನೆ ವಿಸ್ತಾರ ಗೊಳ್ಳುತ್ತಿದ್ದಾಗಲೆ, ಇಂಟರ್ ನೆಟ್ ಎಂಬುದು ಇನ್ನೂ ಕಣ್ಣು ಬಿಡುತ್ತಿದ್ದಾಗಲೆ, ತಂತ್ರಾಂಶಗಳಿಗೆ ಬಂದೆರಗುವ ವೈರಸ್ ಎಂಬ ಮಹಮ್ಮಾರಿಯ ಕುರಿತು ಅರಿತು, ಅವುಗಳ ನಿವಾರಣೆಗಾಗಿ ಆಂಟಿವೈರಸ್ ತಂತ್ರಾಂಶವನ್ನು ದೇಶೀಯವಾಗಿ ತಯಾರಿಸಿದ ಕೀರ್ತಿ ಈ ಅಣ್ಣತಮ್ಮಂದಿರಿಗೆ ಸಲ್ಲುತ್ತದೆ. ಅವರೆಂದರೆ ಮಹಾರಾಷ್ಟ್ರ ಮೂಲದ ಕೈಲಾಸ್ ಸಾಹೇಬ್ರಾವ್ ಕಾಟ್ಕರ್ ಮತ್ತು ಸಂಜಯ್ ಸಾಹೇಬ್ರಾವ್ ಕಾಟ್ಕರ್. ಅವರು ಸಿದ್ಧಪಡಿಸಿ ದೇಶಾದಾದ್ಯಂತ ಲಕ್ಷಾಂತರ ಕಂಪ್ಯೂಟರ್, ಸ್ಮಾರ್ಟ್ ಫೋನುಗಳಿಗೆ ವೈರಸ್ ಗಳಿಂದ ರಕ್ಷಣೆ ಕೊಡುತ್ತಿರುವ ಆಂಟಿವೈರಸ್ ತಂತ್ರಾಂಶವೇ ’ಕ್ವಿಕ್ಹೀಲ್’!.
   ಇಂದು ಭಾರತದ ಕಂಪ್ಯೂಟರ್, ಸ್ಮಾರ್ಟ್ಫೋನ್ ಬಳಕೆದಾರರಿಗೆ ಚಿರಪರಿಚಿತ ವಾಗಿರುವ ಮೊಟ್ಟಮೊದಲ ಸ್ವದೇಶೀ ಆಂಟಿವೈರಸ್ ತಂತ್ರಾಂಶ ರೂಪುಗೊಂಡ ಬಗೆ, ಅದರ ಏಳು ಬೇಳುಗಳ ಕಥೆಯನ್ನು ಆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ತಾಂತ್ರಿಕ ಅಧಿಕಾರಿಯಾಗಿರುವ ಸಂಜಯ್ ಕಾಟ್ಕರ್ ಅವರ ಮಾತುಗಳಲ್ಲೇ ಕೇಳುವುದೆಂದರೆ ಅದೊಂದು ರೋಚಕವಾದ (ಸಿನಿಮಾ ತೆಗೆಯಲು ಅರ್ಹವಾದ) ಕಥೆಯೇ ಆದೀತು. ಇಂದು ಭಾರತವಷ್ಟೇ ಅಲ್ಲದೆ ಜಪಾನ್, ಅಮೆರಿಕಾ, ದುಬೈ, ಆಫ್ರಿಕಾ ಮೊದಲಾದ ದೇಶಗಳ ಮಾರುಕಟ್ಟೆಗಳಿಗೂ ಲಗ್ಗೆಯಿಟ್ಟು ನೂರಾರು ಕೋಟಿ ರೂಪಾಯಿಗಳ ವ್ಯಾಪಾರ ನಡೆಸುತ್ತಾ ಬಳಕೆದಾದರ ಮನ ಗೆದ್ದಿರುವ ಕ್ವಿಕ್ಹೀಲ್ ಅನ್ನು ಮತ್ತಷ್ಟು ಬೆಳೆಸುವುದಕ್ಕಾಗಿ ಷೇರು ಮಾರುಕಟ್ತೇಯ ಮೂಲಕ ರೂ.250 ಕೋಟಿ ಸಂಗ್ರಹ ಮಾಡಲು ಇದೇ ಫಿಬ್ರವರಿ 8 ರಿಂದ 10 ರ ವರೆಗೆ ಪ್ರಾಥಮಿಕ ಸಾರ್ವಜನಿಕ ಕೊಡುಗೆ (ಐಪಿಓ) ಹೊರಡಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಟಿಯಲ್ಲಿ ’ಗಂಧದಗುಡಿ’ಯೊಂದಿಗೆ ಸಂಜಯ್ ಹಂಚಿಕೊಂಡ ತಮ್ಮ ಯಶಸ್ಸಿನ ಕಥೆ ಇದು..
   ಮಹಾರಾಷ್ಟ್ರದ ಬಡ ರೈತರಲ್ಲಿ ಒಬ್ಬರಾದ ಸಾಹೇಬ್ರಾವ್ ಕಾಟ್ಕರ್ ಅವರ ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯವರಾದ ಕೈಲಾಸ್ ಕುಟುಂಬದ್ ಪೋಷಣೆಗಾಗಿ ತಮ್ಮ ತಂದೆ ಪಡುತ್ತಿರುವ ಕಷ್ಟಗಳನ್ನು ನೋಡಲಾಗದೆ ತಮ್ಮ ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ನಿಲ್ಲಿಸಿ  ಸ್ಕ್ರೀನ್ ಪ್ರಿಂಟಿಂಗ್ ಕೆಲಸ ಕಲಿತು ಆ ಮೂಲಕ ಸ್ವಯಂ ಉದ್ಯೋಗವನ್ನು ಕಂಡುಕೊಂಡು ದುಡಿಯಲಾರಂಭಿಸಿದರು. ಕೆಲ ದಿನಗಳ ನಂತರ ಜೊತೆಗೆ ರೇಡಿಯೋ ರಿಪೇರಿ ಮಾಡತೊಡಗಿದರು. ಆನಂತರ ಬ್ಯಾಂಕುಗಳಲ್ಲಿ ಬಳಸುತ್ತಿದ್ದ ಕ್ಯಾಲಿಕ್ಯುಲೇಟರ್, ಲೆಡ್ಜರ್ ಪೋಸ್ಟಿಂಗ್ ಮಿಷಿನ್ ರಿಪೇರಿ ಮಾಡಲು ಶುರು ಹಚ್ಚಿಕೊಂಡರು. ಅಷ್ಟರಲ್ಲಾಗಲೇ ಬ್ಯಾಂಕುಗಳಲ್ಲಿ ಕಂಪ್ಯೂಟರುಗಳ ಬಳಕೆ ಆರಂಭವಾಗತೊಡಗಿತ್ತು. ಕಂಪ್ಯೂಟರ್ ರಿಪೇರಿ ಕಲಿತರೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಎಂಬುದನ್ನು ಮನಗಂಡ ಕೈಲಾಸ್ ಆ ಕೆಲಸಕ್ಕೂ ಕೈ ಹಾಕಿದರು. ಆ ಸಮಯಕ್ಕೆ ಅವರ ತಮ್ಮನಾದ ಸಂಜಯ್ ಇಂಜಿನೀರಿಂಗ್ ಕೋರ್ಸಿಗೆ ಪ್ರವೇಶ ಪಡೆದಿದ್ದರು. ಅವರದ್ದು ಕಂಪ್ಯೂಟರ್ ಸೈನ್ಸ್ ವಿಭಾಗವಾಗಿದ್ದರೂ ಕಾಲೇಜಿನಲ್ಲಿ ಸಾಕಷ್ಟು ಕಂಪ್ಯೂಟರುಗಳು ಲಭ್ಯವಿಲ್ಲದ ಕಾರಣ ಅವುಗಳ ಬಳಕೆಗೆ ಅವಕಾಶ ಅಷ್ಟಾಗಿ ಸಿಗುತ್ತಿರಲಿಲ್ಲ. ಹಾಗಾಗಿ ಬಿಡುವಿನ ವೇಳೆಯಲ್ಲಿ ಅಣ್ಣನ ಜೊತೆಗಿದ್ದು ರಿಪೇರಿಗಾಗಿ ಬರುತ್ತಿದ್ದ ಕಂಪ್ಯೂಟರುಗಳಲ್ಲಿ ಕೆಲಸ ಕಲಿಯ ತೊಡಗಿದರು. ಆ ಸಮಯದಲ್ಲಿ ಅವರಿಗೆ ತಂತ್ರಾಂಶಗಳಿಗೆ ಬಂದೆರಗಿ ಅವುಗಳನ್ನು ನಾಶಮಾಡುವ ವೈರಸ್ ಗಳ ಕುರಿತಂತೆ ಅರಿವಾಯಿತು. ಇಂಜಿನೀರಿಂಗ್ ಮುಗಿದು ಸ್ನಾತಕೋತ್ತರ ಪದವಿಗೆ ಸೇರಿದ ಸಂಜಯ್ ಓದಿನ ಜೊತೆಗೆ ವೈರಸ್ ನಿವಾರಣೆ ಕುರಿತು ಪ್ರಯೋಗಗಳನ್ನು ಮಾಡತೊಡಗಿದರು. ಅವರ ಸಾಧನೆಯ ಫಲವಾಗಿ ಪ್ರಪ್ರಥಮ ಸ್ವದೇಶೀ ಆಂಟಿವೈರಸ್ ತಂತ್ರಾಂಶ ಕ್ವಿಕ್ ಹೀಲ್ ರೂಪುಗೊಂಡಿತು.
   ಸಂಜಯ್ ತಮ್ಮ ಸ್ನಾತಕೋತ್ತರ ಪದವಿ ಮುಗಿಸಿ ಕಾಲೇಜಿನಿಂದ ಹೊರಬೀಳುವ ಮೊದಲೇ 1995 ರಲ್ಲಿ  ಕ್ವಿಕ್ಹೀಲ್ ಮೊದಲ ಆವ್ರತ್ತಿಯನ್ನು ಬಿಡುಗಡೆ ಮಾಡಿದರು. ಅದರ ಮಾರ್ಕೆಟ್ ಮಾಡುವ ಜವಾಬ್ದಾರಿಯನ್ನು ಅಣ್ಣ ಕೈಲಾಸ್ ವಹಿಸಿಕೊಂಡರು. ಮೊದಲು ಪುಣೆ ನಗರದಲ್ಲಿ ಕಂಪ್ಯೂಟರ್ ಮಳಿಗೆಗಳಲ್ಲಿ ಕ್ವಿಕ್ಹೀಲ್ ಮಾರಾಟ ಮಾಡತೊಡಗಿದರು. ಆದರೆ ಅಂದಿನ ದಿನಗಳಲ್ಲಿ ವೈರಸ್ ಕಾಟ ಅಷ್ಟಾಗಿ ಇಲ್ಲದಿರುವುದು ಮತ್ತು ದುಡ್ಡುಕೊಟ್ಟು ತಂತ್ರಾಂಶಗಳನ್ನು ಕೊಳ್ಳಲು ಕಂಪ್ಯೂಟರ್ ಬಳ್ಕೆದಾರರು ಆಸಕ್ತಿ ತೋರದ ಕಾರಣ ಅಣ್ಣ ತಮ್ಮಂದಿರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿರುವುದಿಲ್ಲ. ಆದರೂ ಛಲ ಬಿಡದೆ ಸಂಶೋಧನೆ ಮತ್ತು ಮಾರುಕಟ್ಟೆ ವಿಸ್ತರಣೆಯನ್ನು ಮುಂದುವರೆಸಿದ ಫಲವಾಗಿ ಅವರ ವ್ಯವಹಾರ ದಿನೇದಿನೇ ಅಭಿವ್ರದ್ಧಿ ಆಗುತ್ತಾ ಬಂದಿತು. ಹಾಗಾಗಿ 1998 ರಿಂದ ಕಂಪ್ಯೂಟರ್ ರಿಪೇರಿಯನ್ನು ಪಕ್ಕಕ್ಕಿಟ್ಟು ಪೂರ್ತಿಯಾಗಿ ಕ್ವಿಕ್ಹೀಲ್ ವ್ಯಾಪಾರದತ್ತ ಗಮನ ಹರಿಸಿದರು. 2002 ರಲ್ಲಿ ಅನುಭವಿಗಳಾದ ಮಾರ್ಕೆಟಿಂಗ್ ತಂಡವನ್ನು ನೇಮಿಸಿಕೊಂಡು ದೇಶದಾದ್ಯಂತ ವ್ಯಾಪಾರವನ್ನು ವಿಸ್ತರಿಸಿದರು. 2011 ರಲ್ಲಿ ಎಂಟರ್ಪ್ರೈಸ್ ಸೆಕ್ಯುರಿಟಿ ತಂತ್ರಾಂಶವನ್ನು ಅಭಿವ್ರದ್ದಿ ಪಡಿಸಿದರು. ಅಷ್ಟರಲ್ಲಿ ಇಂಟರ್ನೆಟ್ ಬಳಸ ಬಹುದಾದ ಸ್ಮಾರ್ಟ್ಫೋನಗಳು ಮಾರುಕಟ್ಟೆಯಲ್ಲಿ ವಿಜ್ರಂಭಿಸಲಾರಂಭಿಸಿದ್ದವು. ಅವುಗಳಿಗೆ ಸೂಕ್ತವಾದ ಆಂಟಿವೈರಸ್ ತಂತ್ರಾಂಶವನ್ನು 2015 ರಲ್ಲಿ ಕ್ವಿಕ್ಹೀಲ್ ನಿಂದ ಹೊರತರಲಾಯಿತು. ಹೀಗೆ ಒಂದೊಂದೇ ಮಜಲುಗಳನ್ನು ದಾಟುತ್ತಾ ಇಂದು ದೇಶದ ನಂಬರ್ ವನ್ ಆಂಟಿವೈರಸ್ ತಂತ್ರಾಂಶ ಎಂಬ ಖ್ಯಾತಿಗೆ ಕ್ವಿಕ್ಹೀಲ್ ಪಾತ್ರವಾಗಿದೆ. ಅಷ್ಟೇ ಅಲ್ಲದೆ ವಿದೇಶಗಳಿಗೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದೆ. ಇಂದು ಪ್ರತಿದಿನ ಸುಮಾರು 2.50 ಲಕ್ಷ ವೈರಸ್ ಗಳು ಉತ್ಪತ್ತಿಯಾಗುತ್ತಿದ್ದು, ಕಂಪ್ಯೂಟರ್ ಬಳಕೆದಾರರು ಅದರಲ್ಲೂ ಇಂಟರ್ನೆಟ್ ಬಳಸುವವರು ಆಂಟಿವೈರಸ್ ಬಳಸಲೇಬೇಕಾದ ಅನಿವಾರ್ಯತೆ ಏರ್ಪಟ್ಟಿದೆ. ಮುಂದಿನ ದಿನಗಳಲಿ ತಮ್ಮ ಎಂಟರ್ಪ್ರೈಸ್ ಸೆಕ್ಯುರಿಟಿ ತಂತ್ರಾಂಶವನ್ನು ಇನ್ನಷ್ಟು ಅಭಿವ್ರದ್ಧಿಗೊಳಿಸಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ವಿಕ್ಹೀಲ್ ಸ್ಥಾನವನ್ನು ಭದ್ರಗೊಳಿಸುವುದು ತಮ್ಮ ಮುಂದಿರಿವ ಗುರಿ ಎಂದು ಸಂಜಯ್ ತಮ್ಮ ಗುರಿಯನ್ನು ಸ್ಪಷ್ಟ ಪಡಿಸಿದರು. ಕಾಟ್ಕರ್ ಸಹೋದರರ ಈ ಸಾಹಸೋಪೇತ ಪ್ರಯತ್ನಕ್ಕೆ ಯಶಸ್ಸು ಕೋರುವುದು”ಮೇಕ್ ಇನ್ ಇಂಡಿಯಾ’ ಬೆಂಬಲಿಸಿದಂತೆ ಅಲ್ಲವೇ.!!