Saturday, December 12, 2015

ಆತಿಥ್ಯ ಕ್ಷೇತ್ರದ ಸಲಹೆ, ಸೇವೆಗಳಿಗೆಂದೇ ಮೀಸಲಾದ ಒಎಂಎಸ್



   ದೇಶದಲ್ಲಿ ಪ್ರವಾಸೋದ್ಯಮ, ವಾಣಿಜ್ಯ ಮತ್ತು ವ್ಯಾಪಾರ ಕಾರ್ಯಕಲಾಪಗಳು ದಿನೇದಿನೇ ವಿಸ್ತರಿಸುತ್ತಿದ್ದು ಜನರು ವ್ಯಾಪಾರ, ಉದ್ಯೋಗ, ವಿರಾಮ ಮತ್ತಿತರೆ ಕಾರಣಗಳಿಗಾಗಿ ಮನೆಯಿಂದ ಹೊರಗೆ ತಮ್ಮ ದಿನಗಳನ್ನು ಕಳೆಯಬೇಕಾದ ಅನಿವಾರ್ಯತೆ ಹೆಚ್ಚುತ್ತಿದೆ. ಅದರ ಹಿನ್ನೆಲೆಯಲ್ಲಿ ಮಹಾನಗರಗಳಷ್ಡೇ ಅಲ್ಲದೆ ದ್ವಿತೀಯ, ತೃತೀಯ ಶ್ರೇಣಿಯ ನಗರಗಳು, ಪಟ್ಟಣಗಳು, ಪ್ರವಾಸ ಸ್ಥಳಗಳಲ್ಲಿ ಹೋಟೆಲ್‍ಗಳು ಮತ್ತು ರೆಸ್ಟಾರೆಂಟ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತುತ್ತಿರುವುದನ್ನು ಕಾಣುತ್ತಿದ್ದೇವೆ.
   ಇದರೊಂದಿಗೆ ಹಲವಾರು ಬಹುರಾಷ್ಟ್ರೀಯ ಆತಿಥ್ಯ ಸಂಸ್ಥೆಗಳು ಸಹ ಭಾರತದಲ್ಲಿ ತಮ್ಮ ಹೋಟಲ್‍ಗಳ ಸ್ಥಾಪನೆಗೆ ಮುಂದಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಆತಿಥ್ಯ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ಉಂಟಾಗುತ್ತಿದ್ದು ಉತ್ತಮ ಗುಣಮಟ್ಟದ ಸೇವೆಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ನೀಡಬೇಕಾದುದು    ಅನಿವಾರ್ಯವಾಗಿದೆ ಎಂದರೆ ತಪ್ಪಾಗಲಾರದು.
    ಹೋಟಲ್ ಮತ್ತು ರೆಸ್ಟಾರೆಂಟ್ ಮಾಲೀಕರು ಮತ್ತು ಆಡಳಿತ ಮಂಡಳಿಗಳಿಗೆ ಅವುಗಳ ದಿನನಿತ್ಯದ ಕಾರ್ಯಕಲಾಪಗಳ ನಿರ್ವಹಣೆ ಕುರಿತಂತೆ ಎಲ್ಲರೀತಿಯ ಸಲಹೆ, ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ನೀಡಿ ಅವರ ವ್ಯಾಪಾರದ ಅಭಿವೃದ್ಧಿಗೆ ಸಹಕರಿಸಲು ಮುಂದೆಬಂದಿದೆ ವನ್ ಮ್ಯಾನ್ ಶೋ(ಒಎಂಎಸ್). ಸಚಿನ್ ಬಲದವ ಅವರ ನಾಯಕತ್ವದಲ್ಲಿ ಬೆಂಗಳೂರನ್ನು ಪ್ರಧಾನ ಕೇಂದ್ರವಾಗಿ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು ಈಗಾಗಲೆ ಸೂರತ್, ಸೋಲಾಪುರ, ಲಾತೂರ್, ಪುಣೆ, ಮುಂಬೈ, ಗೋವಾ, ಹೈದರಾಬಾದ್‍ಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತಿದ್ದು ಸದ್ಯದಲ್ಲೆ ದುಬೈಗೆ ವಿಸ್ತರಿಸಲಿದೆ.
    ವನ್ ಮ್ಯಾನ್ ಶೋ ಈಗಾಗಲೆ ನಿರ್ವಹಿಸುತ್ತಿರುವ  ಹೋಟಲ್, ರೆಸ್ಟಾರೆಂಟ್, ಕ್ಯಾಟರಿಂಗ್, ಸ್ಪಾ, ರಿಸಾರ್ಟ್‍ಗಳ ಲೋಪಗಳನ್ನು ಸರಿಪಡಿಸಿ ಸಂಪನ್ಮೂಲಗಳ ಸದ್ಭಳಕೆ ಮತ್ತು ವೆಚ್ಚಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನಮಾಡಿ ಸಲಹೆಗಳನ್ನು ನೀಡುತ್ತದೆ. ಹೊಸದಾಗಿ ಸ್ಥಾಪನೆ ಮಾಡಬೇಕೆಂದಿರುವ ಸಂಸ್ಥೆಗಳಿಗೆ ಅಗತ್ಯ ವಸ್ತುಗಳ ಖರೀದಿ, ಸ್ಥಾಪನೆ, ಆಡಳಿತ, ಲೆಕ್ಕಪತ್ರಗಳ ನಿರ್ವಹಣೆ, ಅಡುಗೆ ಮನೆಯ ಯೋಜನೆ, ಮಾನವ ಸಂಪನ್ಮೂಲಗಳ ನಿರ್ವಹಣೆ, ಮಾರಾಟ ಮತ್ತು ಮಾರ್ಕೆಟಿಂಗ್, ರೆಸ್ಟಾರೆಂಟ್ ಮತ್ತು ಬಾರ್‍ನ ಜೋಡಣೆ, ಆಹಾರ ಪದಾರ್ಥಗಳ ಯೋಜನೆ ಮತ್ತು ಬೆಲೆ ನಿರ್ಧಾರ,  ಕಾರ್ಯಕ್ರಮಗಳು ಮತ್ತು ಸಮಾರಂಭಗಳ ಆಯೋಜನೆ, ಸಿಬ್ಬಂದಿ ನಿಯೋಜನೆ ಮತ್ತು ತರಬೇತಿ, ಇಂಜಿನಿಯರಿಂಗ್ ಮತ್ತು ನಿರ್ವಹಣೆ, ಅವುಗಳ ಅಳವಡಿಕೆ ಮುಂತಾದ ಎಲ್ಲರೀತಿಯ ಸೇವೆಗಳನ್ನು ನೀಡುತ್ತದೆ.
   ಸಣ್ಣ ಮತ್ತು ಮಧ್ಯಮ ದರ್ಜೆಯ ಸಂಸ್ಥೆಗಳಿಗೆ ಸುಲಭವಾದ ಹೂಡಿಕೆಯೊಂದಿಗೆ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಅನುವಾಗುವಂತೆ ಅವರವರ ಅಗತ್ಯಕ್ಕೆ ತಕ್ಕಂತೆ ಫ್ರಾಂಚೈಸಿ ಮಾದರಿಗಳನ್ನು ಸೃಷ್ಟಿಸಿಕೊಡಲಾಗುತ್ತಿದೆ.
   ಆತಿಥ್ಯ ಮತ್ತು ಪ್ರವಾಸೋದ್ಯಮದಲ್ಲಿ ಬೆಂಗಳುರು ದೇಶದಲ್ಲಿಯೇ ಅತಿ ವೇಗವಾಗಿ ಮುಂದುವರೆಯುತ್ತಿರುವ ನಗರವಾಗಿದ್ದು ಇಲ್ಲಿನ ಮಾಹಿತಿ ತಂತ್ರಜ್ಞಾನ ಉದ್ಯಮದ ಬೆಳವಣಿಗೆಯಿಂದಾಗಿ ಇಲ್ಲಿ ಆತಿಥ್ಯ ಉದ್ಯಮಕ್ಕೆ ಅವಕಾಶಗಳೂ ಹೆಚ್ಚಾಗುತ್ತಿವೆ ಎನ್ನುತ್ತಾರೆ ಒಎಂಎಸ್‍ನ ಮುಖ್ಯಸ್ಥರಾದ ಸಚಿನ್ ಬಲದವ.

No comments:

Post a Comment