Monday, December 14, 2015

ನಾರಾಯಣ ಹೃದಯಾಲಯದಿಂದ ಸಾರ್ವಜನಿಕ ಷೇರು ವಿತರಣೆ


- ಡಿಸೆಂಬರ್ 17, 2015ರಂದು ಆರಂಭ
- ದರ ಪಟ್ಟಿ ಪ್ರತಿ ಈಕ್ವಿಟಿ ಷೇರಿಗೆ ರೂ. 245   ರಿಂದ ರೂ. 250

ಬೆಂಗಳೂರು: ನಾರಾಯಣ ಹೃದಯಾಲಯ ಲಿಮಿಟೆಡ್ (ದ ಕಂಪೆನಿ ಅಥವಾ ಇಷ್ಯುಯರ್) ಈಗ ಸಂಬಂಧಿಸಿದವರ ಅನುಮೋದನೆ ಕಾದಿರಿಸಿ, ವಿವರಣಾ ಪತ್ರಿಕೆಯ ಮೂಲಕ ಸಾರ್ವಜನಿಕ ಷೇರು ವಿತರಣೆಯನ್ನು ಆರಂಭಿಸಲು ಡಿಸೆಂಬರ್ 8, 2015ರಂದು ನೋಂದಣಿ ಮಾಡಿದ್ದು, ತಲಾ ರೂ. 10 ಮುಖಬೆಲೆಯ 24,523,297 ಈಕ್ವಿಟಿ ಷೇರುಗಳನ್ನು ಪ್ರತಿ ಈಕ್ವಿಟಿ ಷೇರಿಗೆ ರೂ. 245 ರಿಂದ ರೂ.250ರ ದರಪಟ್ಟಿಯಲ್ಲಿ ವಿತರಿಸಲು ಆಹ್ವಾನಿಸಿದೆ. ಇದರಲ್ಲಿ ಷೇರು ಪ್ರೀಮಿಯಂ ಸೇರಿದ್ದು, ಒಟ್ಟು 6,287,978 ಈಕ್ವಿಟಿ ಷೇರುಗಳನ್ನು ಅಶೋಕಾ ಇನ್‍ವೆಸ್ಟ್ಮೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಮೂಲಕ; 1,886,455 ಈಕ್ವಿಟಿ ಷೇರುಗಳನ್ನು ಅಂಬಾದೇವಿ ಮಾರಿಷಸ್ ಹೋಲ್ಡಿಂಗ್ ಕಂಪೆನಿ ಮೂಲಕ; 12,261,648 ಈಕ್ವಿಟಿ ಷೇರುಗಳನ್ನು ಜೆಪಿ ಮಾರ್ಗನ್ ಮಾರಿಷಸ್ ಹೋಲ್ಡಿಂಗ್ v1ಲಿಮಿಟೆಡ್ ಮೂಲಕ (ದಿ ಇನ್‍ವೆಸ್ಟರ್ ಸೆಲ್ಲಿಂಗ್ ಷೇರ್‍ಹೋಲ್ಡರ್ಸ್) ಮೂಲಕ; 2,043,608 ಈಕ್ವಿಟಿ ಷೇರುಗಳನ್ನು ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ಮೂಲಕ; 2,043,608 ಈಕ್ವಿಟಿ ಷೇರುಗಳನ್ನು ಶಕುಂತಲಾ ಶೆಟ್ಟಿ ಅವರ ಮೂಲಕ (ಪ್ರೊಮೋಟರ್ ಸೆಲ್ಲಿಂಗ್ ಶೇರ್ ಹೋಲ್ಡರ್ಸ್) ಮೂಲಕ ( ಒಟ್ಟಾಗಿ ಸೆಲ್ಲಿಂಗ್ ಶೇರ್‍ಹೋಲ್ಡರ್ಸ್ (ಮಾರಾಟಕ್ಕಾಗಿ ಕೊಡುಗೆ) ಸೇರಿದೆ. ಇದು ಆಹ್ವಾನ ಪೂರ್ವದ ಷೇರು ಬಂಡವಳಾದ ಶೇ 12ರಷ್ಟು ಆಗಿದೆ.
ಕನಿಷ್ಠ ಬಿಡ್ ಲಾಟ್ 60 ಈಕ್ವಿಟಿ ಷೇರುಗಳಾಗಿದ್ದು, ಆ ಬಳಿಕ 60ರ ಗುಣಕದಲ್ಲಿ ಖರೀದಿ ಮಾಡಬಹುದು. ಕಂಪೆನಿ, ಸೆಲ್ಲಿಂಗ್ ಶೇರ್‍ಹೋಲ್ಡರ್‍ಸ್‍ಗಳು ಬಿಆರ್‍ಎಲ್‍ಎಂ ಜೊತೆಗೆ ಚರ್ಚಿಸಿ, ಭಾಗವಹಿಸುವ ಆ್ಯಂಕರ್ ಹೂಡಿಕೆದಾರನ್ನು ನಿರ್ಧರಿಸಬಹುದು.
ಆ್ಯಂಕರ್ ಹೂಡಿಕೆದಾರರಲ್ಲಿ ಆ್ಯಂಕರ್ ಹೂಡಿಕೆ ಬಿಡ್ಡಿಂಗ್ ದಿನವನ್ನು ಹೂಡಿಕೆ ದಿನ ಅಥವಾ ಅದರ ಒಂದು ದಿನ ಮೊದಲು ಮಾಡಬಹುದು. ಬಿಡ್ಡಿಂಗ್ ಡಿಸೆಂಬರ್ 21,2015ರಂದು ಅಂತ್ಯವಾಗಲಿದೆ. ಈಕ್ವಿಟಿ ಷೇರುಗಳುನ್ನು ಬಿಎಸ್‍ಇ ಲಿಮಿಟೆಡ್ ಮತ್ತು ರಾಷ್ಟ್ರೀಯ ಷೇರು ವಿತರಣಾ ಲಿಮಿಟೆಡ್ (ಎನ್‍ಎಇ) ಅಲ್ಲಿ ನೋಂದಣಿ ಮಾಡಲಾಗಿದೆ.
ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ಸ್ (ಬಿಆರ್‍ಎಲ್‍ಎಂ) ಆಗಿ ಆ್ಯಕ್ಸಿಸ್ ಕ್ಯಾಪಿಟಲ್ ಲಿಮಿಟೆಡ್, ಐಡಿಎಫ್‍ಸಿ ಸೆಕ್ಯೂರಿಟೀಸ್ ಲಿಮಿಟೆಡ್ ಮತ್ತು ಜೆಫೆರಿಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಯ ನಿರ್ವಹಿಸಲಿದೆ.
ಈ ಷೇರು ಆಹ್ವಾನವನ್ನು ಸೆಕ್ಯೂರಿಟೀಸ್ ಅಂಡ್ ಎಕ್ಸ್‍ಚೇಂಜ್ ಬೋರ್ಡ್ ಆಫ್ ಇಂಡಿಯಾದ ನಯಮ 26(1)ರ ಅನ್ಯವ ಮಾಡಲಾಗುತ್ತಿದೆ. ಬುಕ್ ಬಿಲ್ಡಿಂಗ್ ಪ್ರಾಸೆಸ್ ಮೂಲಕ ಮಾಡಲಿದ್ದು, ಈ ಪೈಕಿ ಶಏ 50ರಷ್ಟು ಷೇರುಗಳನ್ನು ಅರ್ಹ ಸಾಂಸ್ಥಿಕ ಖರೀದಿದಾರಿಗೆ ಹಂಚಿಕೆ ಮಾಡಲಾಗುತ್ತದೆ. ಕಂಪನಿ ಅಥವಾ ಸೆಲ್ಲಿಂಗ್ ಶೇರ್‍ಹೋಲ್ಡರ್ಸ್ ಶೇ 60ರಷ್ಟು ಕ್ಯೂಐಬಿ ಭಾಗವನ್ನು ಆ್ಯಂಕರ್ ಹೂಡಿಕೆದಾರರನ್ನು ತಮ್ಮ ವಿವೇಚನಾ ಅನುಸಾರ ನಿಗದಿಪಡಿಸಬಹುದಾಗಿದೆ.
ಈ ಪೈಕಿ ಮೂರನೇ ಒಂದು ಭಾಗದಷ್ಟು ಭಾಗವನ್ನು ಅರ್ಹ ದೇಶಿಯ ಮ್ಯೂಚುವಲ್ ಫಂಡ್‍ನಿಂದ ಬಿಡ್‍ಬರಲಿದೆ ಎಂಬುದನ್ನು ಕಾದಿಸಿರಿ ಮ್ಯೂಚುವಲ್ ಫಂಡ್‍ಗೆ ಮೀಸಲಾಗಿ ಇರಿಸಲಾಗಿದೆ. ಕ್ಯೂಐಬಿ ಭಾಗದ ಶೇ 5ರಷ್ಟನ್ನು (ಆ್ಯಂಕರ್ ಹೂಡಿಕೆಯನ್ನು ಹೊರತುಪಡಿಸಿ) ಮ್ಯೂಚುವಲ್ ಫಂಡ್‍ಗಳಿಗೆ ಅನುಪಾತದ ಪ್ರಮಾಣವನ್ನು ಆಧರಿಸಿ ಕಾದಿರಿಸಲಾಗುತ್ತದೆ. ಅಲ್ಲದೆ, ಶೇ 15ಕ್ಕೆ ಮೀರದಂತೆ ಷೇರುಗಳು ಸಾಂಸ್ಥಿಕೇತರ ಅರ್ಹ ಬಿಡ್‍ದಾರರಿಗೆ ಹಂಚಿಕೆಗೆ ಲಭ್ಯವಿದೆ; ಶೇ 35ಕ್ಕೆ ಕಡಿಮೆ ಇಲ್ಲದಂತೆ ಷೆರುಗಳು ಬಿಡಿ ವ್ಯಕ್ತಿಗತ ಬಿಡ್‍ದಾರರಿಗೆ ಸೆಬಿ, ಐಸಿಡಿಆರ್ ನಿಯಮಾನುಸಾರ ಹಂಚಿಕೆಗೆ ಲಭ್ಯವಿದೆ. ಎಲ್ಲ ಅರ್ಹ ಹೂಡಿಕೆದಾರರು, ಆ್ಯಂಕರ್ ಹೂಡಿಕೆದಾರರನ್ನು ಹೊರತುಪಡಿಸಿ, ಈ ವಿತರಣೆಯಲ್ಲಿ ಅಪ್ಲಿಕೇಷನ್ ಸಪೋರ್ಟೆಡ್ ಬೈ ಬ್ಲಾಕ್ಡ್ ಅಮೌಂಟ್ (ಎಎಸ್‍ಬಿಎ) ಮೂಲಕ ಭಾಗವಹಿಸಬಹುದು. ಕ್ಯೂಐಬಿಗಳು (ಆ್ಯಂಕರ್ ಹೂಡಿಕೆದಾರರನ್ನು ಹೊತತಪಡಿಸಿ) ಸಾಂಸ್ಥಿಕೇತರ ಬಿಡ್‍ದಾರರು ಕಡ್ಡಾಯವಾಗಿ ಎಎಸ್‍ಬಿಎ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಅಗತ್ಯವಾಗಿದೆ.
ಮುಖ್ಯ ಪ್ರವರ್ತಕರಾದ ಡಾ. ದೇವಿ ಪ್ರಸಾದ್ ಶೆಟ್ಟಿಅವರು 2000ರಲ್ಲಿ ಸ್ಥಾಪಿಸಿದ ಸಂಸ್ಥೆಯು ವೈದ್ಯಕೀಯ ಸೇವೆಯಲ್ಲಿ 30 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದು, ಕಂಪೆನಿಯು ಭಾರತದಲ್ಲಿ ಪ್ರಮುಖ ಆರೋಗ್ಯ ಸೇವಾ ಸಂಸ್ಥೆಯಾಗಿದೆ. ರೆಡ್ ಹೆರ್ರಿಂಗ್ ಪ್ರಾಸ್ಪೆಕ್ಟಸ್ ದಿನದಂದು ಆಸ್ಪತ್ರೆಯು 23 ನೆಟ್‍ವರ್ಕ್ ಆಸ್ಪತ್ರೆಗಳು (ಮಲ್ಟಿ ಸ್ಪೆಷಾಲಿಟಿ), 8 ಆರೋಗ್ಯ ಕೇಂದ್ರಗಳು (ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು), 24 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಒಳಗೊಂಡಿದೆ. ಇದರಲ್ಲಿ ಕ್ಲಿನಿಕ್‍ಗಳು, ಮಾಹಿತಿ ಕೇಂದ್ರಗಳು ಸೇರಿವೆ. 31 ನಗರಗಳು, ಪಟ್ಟಣಗಳಲ್ಲಿ ವ್ಯಾಪಿಸಿರುವ ಇದು 5,442 ಕಾರ್ಯ ನಿರ್ವಹಣಾ ಬೆಡ್‍ಗಳನ್ನು ಹೊಂದಿದೆ. 2015ನೇ ಹಣಕಾಸು ವರ್ಷದಲ್ಲಿ 1.97 ಮಿಲಿಯನ್ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸಿದೆ. ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು, ದಕ್ಷಿಣ ಕರ್ನಾಟಕದಲ್ಲಿ ದೃಢವಾದ ಅಸ್ತಿತ್ವ ಹೊಂದಿದೆ. ಸೆಪ್ಟೆಂಬರ್ 30, 2015ರಲ್ಲಿ ಇದ್ದಂತೆ ಆಸ್ಪತ್ರೆಯು 3,236 ಆಡಳಿತ ವ್ಯಕ್ತಿಗಳನ್ನು ಹೊಂದಿದೆ. ಹೆಚ್ಚುವರಿಯಾಗಿ 487 ವಿದ್ಯಾರ್ಥಿಗಳು, 469 ವೈದ್ಯರು, 14 ಅರೆವೈದ್ಯಕೀಯ ಸಿಬ್ಬಂದಿ ಹಾಗೂ 4 ಆಡಳಿತ ತರಬೇತಿದಾರರು ಇದ್ದಾರೆ. ಉಳಿದಂತೆ, 1,750 ವೈದ್ಯರು ಕನ್ಸಲ್ಟೆನ್ಸಿ ಆಧಾರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

No comments:

Post a Comment