Saturday, December 05, 2015

ರಾಷ್ಟ್ರಿಯ ಕೃಷಿ ವಿಮಾ ಯೋಜನೆ : ರೈತರಿಗೆ ಮಾಹಿತಿ

ಬೆಂಗಳೂರು : ಕೃಷಿ ಇಲಾಖೆಯು ಬೆಳೆ ವಿಮಾ ಯೋಜನೆಗೆ ಸಂಬಂಧಪಟ್ಟಂತೆ ಸಾರ್ವಜನಿಕರ ಗಮನಕ್ಕೆ ಈ ಕೆಳಕಂಡ ಮಾಹಿತಿಯನ್ನು ತರಲು ಬಯಸುತ್ತದೆ.
      2015-16 ಹಿಂಗಾರು ಹಂಗಾಮಿನಲ್ಲಿ ಹಾಗೂ ಬೇಸಿಗೆ ಹಂಗಾಮಿನಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿಯಲ್ಲಿ ಎಲ್ಲಾ ಆಹಾರ ಮತ್ತು ಎಣ್ಣೆಕಾಳು ಬೆಳೆಗಳನ್ನು ಅಧಿಸೂಚಿಸಲಾಗಿದೆ.ಇವುಗಳಲ್ಲಿ ತಾಲ್ಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಧಿಸೂಚಿಸಲಾಗಿದೆ. ಈ ಯೋಜನೆಯು ಬೆಳೆಸಾಲ ಪಡೆಯುವ ರೈತರಿಗೆ ಕಡ್ಡಾಯವಾಗಿದ್ದು, ಬೆಳೆಸಾಲ ಪಡೆಯದಂತಹ ರೈತರಿಗೆ ಐಚ್ಪಿಕವಾಗಿರುತ್ತದೆ.
       ಇತರೆ ಬೆಳೆ ಸಾಲ ಪಡೆಯದ ರೈತರು ಯೋಜನೆಯಲ್ಲಿ ಪಾಲ್ಗೊಳ್ಳಲು ಹತ್ತಿರದ ಬ್ಯಾಂಕುಗಳನ್ನು ಸಂಪರ್ಕಿಸಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲಾತಿಗಳಾದ ಪಹಣಿ/ಖಾತೆ ಪತ್ರ/ಕಂದಾಯ ರಶೀದಿ ನೀಡಬೇಕು. ಗ್ರಾಮ ಲೆಕ್ಕಿಗರಿಂದ ಬಿತ್ತನೆ ದೃಢೀüಕರಣ ಪತ್ರ ಪಡೆದು ನೀಡಬೇಕು. ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು ವಿಮಾ ಕಂತನ್ನು ಕಟ್ಟಬೇಕು. ಯೋಜನೆಯಡಿ ಪಾಲ್ಗೊಳ್ಳುವ ಸಮಯದಲ್ಲಿ ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ ನಂತರ 30 ದಿವಸದೊಳಗಿನ ಹಗೂ ಆರೋಗ್ಯಕರವಾಗಿರುವ ಬೆಳೆಗಳನ್ನು ನೊಂದಾಯಿಸಬಹುದು.
       ವಿಮಾ ಕಂತು-ಗೋಧಿ ಬೆಳೆಗೆ 1.5% ಹಾಗೂ ಉಳಿದ ಎಲ್ಲಾ ಅಹಾರ ಮತ್ತು ಎಣ್ಣೆಕಾಳು ಬೆಳೆಗಳಿಗೆ – 2.00% ಪಾವತಿಸಬೇಕಾಗುತ್ತದೆ. ಇದರಲ್ಲಿ ಬೆಳೆ ವಿಮಾ ಯೊಜನೆಯಡಿ ಒಲಪಡುವ ಎಲ್ಲಾ ಸಣ್ಣ/ಅತಿಸಣ್ಣ ರೈತರಿಗೆ 10% ರಿಯಾಯಿತಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಎಲ್ಲಾ ರೈತರಿಗೆ ವಿಮಾ ಕಂತಿನಲ್ಲಿ ಶೇ 90 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ.
       ಹಿಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದೇ ಇರುವ ಎಲ್ಲಾ ರೈತರು ಪಾಲ್ಗೊಳ್ಳಲು ಕೊನೆಯ ದಿನಾಂಕ 31-12-2015 ಹಾಗು ಬೇಸಿಗೆ ಹಂಗಾಮಿನಲ್ಲಿ ಬೆಳೆಸಾಲ ಪಡೆಯದ ರೈತರು ಪಾಲ್ಗೊಳ್ಳಲು ಕೊನೆಯ ದಿನಾಂಕ 28-2-2016 ಹಗೂ ಬೆಳೆ ಸಾಲ ಪಡೆಯುವ ರೈತರು ಪಾಲ್ಗೊಳ್ಳಲು ಕೊನೆಯ ದಿನಾಂಕ : 31-03-2016 ಆಗಿರುತ್ತದೆ.
       ಪ್ರಕೃತಿ ವಿಕೋಪ ಅಂದರೆÀ, ಆಲೀಕಲ್ಲು ಮಳೆ, ಪ್ರವಾಹ, ಭೂ ಕುಸಿತ ಮತ್ತು ಚಂಡಮಾರುತ ಇವುಗಳಿಂದ ಬೆಳೆ ನಷ್ಟ ಸಂಭಿಸಿದಲ್ಲಿ 2015-2016 ರ ಹಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ವೈಯಕ್ತಿಕವಾಗಿ ಬೆಳೆ ನಷ್ಟ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹರವನ್ನು ನೀಡಲಾಗುವುದು. ಈ ಕಾರಣಗಳಿಂದ ನಷ್ಟ ಸಂಭವಿಸಿದರೆ ವಿಮೆ ಮಾಡಿಸಿದ ರೈತರು ಬೆಳೆ ನಷ್ಟವಾದ 48 ಗಂಟೆಯೊಳಗೆ ಅರ್ಜಿಯನ್ನು ಸಂಬಂಧಿತ ಬ್ಯಾಂಕಿನಲ್ಲಿ ಅಥವಾ ನೇರವಾಗಿ ಅಗ್ರಿಕಲ್ಷರ್ ಇನ್ಸೂರೆನ್ಸ್ ಕಂಪನೆ ಆಫ್ ಇಂಡಿಯಾ ಲಿ., ಬೆಂಗಳೂರು ಇವರಿಗೆ ನೀಡಬೇಕು. ಅರ್ಜಿಯಲ್ಲಿ ಬೆಳೆಯ ವಿವರಗಳನ್ನು ನಷ್ಟಕ್ಕೆ ಕಾರಣವನ್ನು ಹಾಗೂ ಬೆಳೆ ನಷ್ಟದ ವ್ಯಾಪ್ತಿಯ ವಿವರಗಳನ್ನು ನೀಡಬೇಕು. ವಿಮಾ ಸಂಸ್ಥೆಯು ವಿವರಗಳನ್ನು ಪಡೆದು ನಷದಟ ನಿರ್ಧಾರಕರನ್ನು ರೈತರ ಜಮೀನಿಗೆ ಕಳುಹಿಸಿಕೊಡುತ್ತಾರೆ.
       ಈ ಅವಕಾಶವನ್ನು ಉಪಯೋಗಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮಾ ಯೋಜನೆಯಡಿಯಲ್ಲಿ ಪಾಲ್ಗೊಳ್ಳಲು ಈ ಮೂಲಕ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಬ್ಯಾಂಕುಗಳನ್ನು ಸಂಪರ್ಕಿಸುವುದು.

No comments:

Post a Comment