
ಪ್ಲಾಸ್ಟಿಕ್ ಹಾನಿಕರ. ಅದರ ಬಳಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಈ ನಿಷೇಧವನ್ನು ವಿಧಿಸಲಾಗಿದೆ. ರಾಜ್ಯದಲ್ಲಿ 450 ಪ್ಲಾಸ್ಟಿಕ್ ಉತ್ಪಾದನಾ ಕಂಪನಿಗಳಿವೆ. ಈ ಕಂಪನಿಗಳು 40 ಮೈಕ್ರಾನ್‍ಗಿಂತಲೂ ಹೆಚ್ಚು ಪ್ರಮಾಣದ ಪ್ಲಾಸ್ಟಿಕ್ ಉತ್ಪಾದನೆ ಮಾಡಿ ರಫ್ತು ಮಾಡಬಹುದಾಗಿದೆ. ಆದ್ದರಿಂದ, ಸರ್ಕಾರದ ಈ ನಿರ್ಧಾರದಿಂದ ಪ್ಲಾಸ್ಟಿಕ್ ತಯಾರಿಕಾ ಕಂಪನಿಗಳಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ. ಜೊತೆಗೆ, ಇಂತಹ ಪ್ಲಾಸ್ಟಿಕ್‍ನಿಂದ ಕೃಷಿ ಕೊಳವೆಗಳು (ಪೈಪುಗಳು) ಮತ್ತು ಸಿಂಪಡಣಾ ಉಪಕರಣಗಳು (ಸ್ಪ್ರಿಂಕ್ಲರ್ ಎಕ್ವಿಪ್‍ಮೆಂಟ್ಸ್) ತಯಾರಿಸಬಹುದಲ್ಲದೆ, ಡಾಂಬರು ರಸ್ತೆಗಳನ್ನು ನಿರ್ಮಿಸಬಹುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
No comments:
Post a Comment