Sunday, October 11, 2015

ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ!


ಬೆಂಗಳೂರು-ಮೈಸೂರು ನಡುವೆ ರೈಲಿನಲ್ಲಿ ಸಂಚಾರ ನಡೆಸುವವರಿಗೆ ಸಿಹಿ ಸುದ್ದಿ. ಉಭಯ ನಗರಗಳ ನಡುವೆ ಸಂಚರಿಸುವ ಕೆಲವು ರೈಲುಗಳ ಮೀಸಲು ಬೋಗಿಗಳನ್ನು ಸಾಮಾನ್ಯ ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಆದರೆ, ಕೆಲವು ಮೀಸಲು ಬೋಗಿಗಳಲ್ಲಿ ಕೇವಲ ಒಬ್ಬರು, ಇಬ್ಬರು ಪ್ರಯಾಣಿಕರು ಮಾತ್ರವಿರುತ್ತಿದ್ದರು. ಸಾಮಾನ್ಯ ಬೋಗಿಗಳ ಟಿಕೆಟ್ ಪಡೆದವರು ಮೀಸಲು ಬೋಗಿಗಳಿಗೆ ಹತ್ತಿದರೆ ದಂಡ ಹಾಕಲಾಗುತ್ತಿತ್ತು. ಆದ್ದರಿಂದ ಸಾಮಾನ್ಯ ಬೋಗಿಗಳಲ್ಲಿ ಜನರ ದಟ್ಟಣೆ ಕಡಿಮೆ ಮಾಡಲು ರೈಲ್ವೆ ಇಲಾಖೆ ಹಲವು ಬೋಗಿಗಳಲ್ಲಿ ಸಾಮಾನ್ಯ ಬೋಗಿಗಳಾಗಿ ಪರಿವರ್ತನೆ ಮಾಡಿದೆ. ಇದರಿಂದ ಸಾಮಾನ್ಯ ಟಿಕೆಟ್ ಪಡೆದವರು ಕೆಲವು ರೈಲುಗಳ ನಿಗದಿತ ಮೀಸಲು ಬೋಗಿಗಳಲ್ಲಿ ಪ್ರಯಾಣ ಮಾಡಲು ಅವಕಾಶವಿದೆ.
ಯಾವ-ಯಾವ ರೈಲುಗಳಲ್ಲಿ ಈ ಸೌಲಭ್ಯ:
* 12578 - ಮೈಸೂರು-ದರ್ಬಾಂಗ್ - ಎಸ್‌4 ರಿಂದ ಎಸ್ 12 ಬೋಗಿ
* 12975 - ಮೈಸೂರು-ಜೈಪುರ - ಎಸ್‌ 4 ರಿಂದ ಎಸ್ 10
* 16229 - ಮೈಸೂರು-ವಾರಣಾಸಿ - ಎಸ್‌ 5 ಮತ್ತು ಎಸ್‌ 6
* 16223 - ಮೈಸೂರು-ಮೈಲಾಡುದೋರೈ - ಎಸ್ 7 ರಿಂದ ಎಸ್ 12
* 16236 - ಮೈಸೂರು-ತೂತ್ತುಕುಡಿ - ಎಸ್‌ 7 ರಿಂದ ಎಸ್ 12
* 16535 - ಮೈಸೂರು-ಸೊಲ್ಲಾಪುರ -ಎಸ್‌ 5 ರಿಂದ ಎಸ್‌ 8
* 16591 - ಹುಬ್ಬಳ್ಳಿ-ಮೈಸೂರು - ಎಸ್‌7 ಮತ್ತು ಎಸ್‌ 8
* 17308 - ಬಾಗಲಕೋಟೆ-ಮೈಸೂರು - ಎಸ್‌ 6 ಮತ್ತು ಎಸ್‌ 7
* 17307 - ಮೈಸೂರು-ಬಾಗಲಕೋಟೆ - ಎಸ್‌ 5 ರಿಂದ ಎಸ್‌ 7
* 56213 - ಚಾಮರಾಜನಗರ-ತಿರುಪತಿ - ಎಸ್‌ 4ರಿಂದ ಎಸ್‌ 7

No comments:

Post a Comment