Friday, October 09, 2015

ಬೆಳ್ಳಂದೂರು ಕೆರೆಯ ನೊರೆ ತಡೆಗಟ್ಟಲು ಮುಖ್ಯಮಂತ್ರಿ ಸೂಚನೆ

ಬೆಂಗಳೂರು : ನಗರದ ಬೆಳ್ಳಂದೂರು ಕೆರೆಯಿಂದ ಉಕ್ಕಿ ಹರಿಯುತ್ತಿರುವ ನೊರೆಯ ಸಮಸ್ಯೆಯನ್ನು ತಡೆಗಟ್ಟಲು ಎಲ್ಲಾ ಅಗತ್ಯ ಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚಿಸಿದ್ದಾರೆ.
    ಬೆಳ್ಳಂದೂರು ಕೆರೆಯಲ್ಲಿ ಒಂದೆಡೆ ನೊರೆ ಹಾಗೂ ಮತ್ತೊಂದೆಡೆ ದುರ್ನಾತ ಹೊರಹೊಮ್ಮಿ  ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿವೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಗುರುವಾರ ದಾಖಲಾದ  ಸಾರ್ವಜನಿಕರ ದೂರು-ದುಮ್ಮಾನಗಳಿಗೆ ಕ್ಷಿಪ್ರವಾಗಿ ಸ್ಪಂದಿಸಿದ ಸಿದ್ದರಾಮಯ್ಯ ಪಾಲಿಕೆಯ ಆಯುಕ್ತ  ಜಿ. ಕುಮಾರ್ ನಾಯಕ್ ಅವರಿಗೆ ದೂರವಾಣಿಯ ಮೂಲಕ ಮಾತನಾಡಿ  ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ. ವೈಯುಕ್ತಿಕ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಿ. ವರದಿ ಸಲ್ಲಿಸಿ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
    ಅಲ್ಲದೆ, ನೊರೆಯ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಕೈಗೊಳ್ಳಬಹುದಾದ  ದೀರ್ಘಕಾಲಿಕ ಕ್ರಮ ಹಾಗೂ ಉಪಕ್ರಮಗಳ ಕುರಿತಂತೆ ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನು ಶೀಘ್ರದಲ್ಲೇ ಕರೆದು ಚರ್ಚಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. 

No comments:

Post a Comment