ಬೆಂಗಳೂರು :ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್, ಅಕ್ಟೋಬರ್ 14, 2015ರಂದು ರೂ. 10 ಮುಖ ಬೆಲೆಯ ಈಕ್ವಿಟಿ ಷೇರುಗಳ ಸಾರ್ವಜನಿಕ ವಿತರಣೆಯನ್ನು ಆರಂಭಿಸಲಿದ್ದು, ಇದರಿಂದ ರೂ. 11,500 ಮಿಲಿಯನ್ ಸಂಪನ್ಮೂಲ ಕ್ರೋಡೀಕರಿಸಲು ಉದ್ದೇಶಿಸಲಾಗಿದೆ. ಸಾರ್ವಜನಿಕ ವಿತರಣೆಯಲ್ಲಿ ನಿವ್ವಳ ವಿತರಣೆ ಮತ್ತು ಅರ್ಹ ಸಿಬ್ಬಂದಿಗೆ ಕಾದಿರಿಸಿದ ರೂ. 150 ಮಿಲಿಯನ ಮೌಲ್ಯದ ಷೇರುಗಳು ಸೇರಿವೆ. ದರಪಟ್ಟಿಯು ಪ್ರತಿ ಈಕ್ವಿಟಿ ಷೇರಿಗೆ ರೂ. 316ರಿಂದ ರೂ. 328 ಎಂದು ಗುರುತಿಸಲಾಗಿದೆ. ಕನಿಷ್ಠ ಬಿಡ್ ಪ್ರಮಾಣ 45 ಈಕ್ವಿಟಿ ಷೇರುಗಳಾಗಿದ್ದು, ನಂತರ 45ರ ಗುಣಕದಲ್ಲಿ ಖರೀದಿಸಬಹುದು.
ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಎಂಬುದು ಕಾಫಿ ಡೇ ಗ್ರೂಪ್‍ನ ಮಾತೃ ಸಂಸ್ಥೆಯಾಗಿದ್ದು, ಕಾಫಿ, ಐಟಿ-ಐಟಿಇಎಸ್ ತಾಂತ್ರಿಕ ಉದ್ಯಾನಗಳ ಅಭಿವೃದ್ಧಿ ಮತ್ತು ನಿರ್ವಹಣೆ, ಸಮಗ್ರ ಲಾಗಿಸ್ಟಿಕ್ ಸಲ್ಯೂಷನ್ಸ್, ಹಣಕಾಸು ಸೇವೆ, ಆತಿಥ್ಯ, ಕಾರ್ಯತಂತ್ರ ಕಂಪನಿಗಳ ಮೇಲೆ ಹೂಡಿಕೆಯ ಕಾರ್ಯದಲ್ಲಿ ತೊಡಗಿದೆ. ದೇಶಾದ್ಯಂತ ಕಾಫಿ ಕೆಫೆಗಳಲ್ಲಿಯೂ ತೊಡಗಿಕೊಂಡಿದೆ. ಇದರ ಜತೆಗೆ ಕಾಫಿ ಸಂಸ್ಕರಣೆ, ಸಂಗ್ರಹ, ರೋಸ್ಟಿಗ್, ಬಿಡಿ ವ್ಯಾಪಾರ ಚಟುವಟಿಕೆಯಲ್ಲಿಯೂ ತೊಡಗಿದೆ. ಕಂಪನಿಯು ತನ್ನ ಮೊದಲ ಕೆಫೆ ಕಾಫಿ ಡೇ ಮಳಿಗೆಯನ್ನು 1996ರಲ್ಲಿ ಬೆಂಗಳೂರಿನಲ್ಲಿ ಆರಂಭಿಸಿದ್ದು, ದೇಶಾದ್ಯಂತ 219ನಗರಗಳಲ್ಲಿ 1,538 ಕೆಫೆ ಮಳಿಗೆಗಳನ್ನು ಹೊಂದಿದೆ
ಕಂಪನಿಯು ಪೂರ್ಣ ಅಂಗ ಸಂಸ್ಥೆಯಾದ ಟ್ಯಾಂಗ್ಲಿನ್ ಡೆವಲಪ್‍ಮೆಂಟ್ ಲಿಮಿಟೆಡ್ ಟೆಕ್ನಾಲಜಿ ಪಾರ್ಕ್ ನಿರ್ವಹಣೆ ಮತ್ತು ಸಂಬಂಧಿತ ಮೂಲಸೌಲಭ್ಯ ವ್ಯವಸ್ಥೆ ನಿರ್ವಹಣೆಯಲ್ಲಿ ತೊಡಗಿದೆ. ಕಂಪನಿಯ ಅಂಗ ಸಂಸ್ಥೆ ಸಿಸ್ಕಲ್ ಲಾಗಿಸ್ಟಿಕ್ ಲಿಮಿಟೆಡ್‍ನಲ್ಲಿ ಸಿಡಿಇಎಲ್ ಶೇ 52.8ರಷ್ಟು ಈಕ್ವಿಟಿ ಹೊಂದಿದ್ದು, ದೇಶದ ಪ್ರಮುಖ ಲಾಗಿಸ್ಟಿಕ್ ಸಲ್ಯೂಷನ್ ಸಂಸ್ಥೆಯಾಗಿದೆ.
ಕಂಪನಿಯ ಅಂಗಸಂಸ್ಥೆಯಾದ ವೇ2ವೆಲ್ತ್ ಸೆಕ್ಯೂರಿಟೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಸಿಡಿಇಎಲ್ ಒಟ್ಟು ಶೇ 85.53ರಷ್ಟು ಈಕ್ವಿಟಿ ಹೊಂದಿದೆ. ಇದು, ಹೂಡಿಕೆ ಸಲಹಾ ಕಂಪನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕಂಪನಿಯು ಮೂರು ವಿಲಾಸಿ ರೆಸಾರ್ಟ್‍ಗಳ ಮಾಲೀಕತ್ವ ಹೊಂದಿದ್ದು, ನಿರ್ವಹಣೆ ಮಾಡುತ್ತಿದೆ. ರೆಸಾಟ್ಸ್‍ಗಳು ಕರ್ನಾಟಕದ ಚಿಕ್ಕಮಗಳೂರು, ಬಂಡಿಪುರ, ಕಬಿನಿಯಲ್ಲಿ ಕಾರ್ಯ ತತ್ಪರವಾಗಿವೆ. ಹೆಚ್ಚುವರಿಯಾಗಿ ಇದು ಅಂಡಮಾನ್, ನಿಕೋಬಾರ್ ದ್ವೀಪದಲ್ಲಿ ಇರುವ ಲಕ್ಸುರಿ ರೆಸಾರ್ಟ್‍ಗಳನ್ನು ನಿರ್ವಹಣೆ ಮಾಡುತ್ತಿದೆ.
ಕಂಪನಿಯು ಇದರ ಜತೆಗೆ ಐಟಿ-ಐಟಿಇಎಸ್ ಮತ್ತು ಇತರೆ ಟೆಕ್ನಾಲಜಿ ಕಂಪನಿಗಳಲ್ಲಿ ಅಂದರೆ ಮೈಡ್‍ಟ್ರೀಯಲ್ಲಿಯೂ ಹೂಡಿಕೆ ಮಾಡಿದ್ದು, ಶೇ 16.75ರಷ್ಟು ಮಾಲೀಕತ್ವ ಹೊಂದಿದೆ. ವಿ.ಜಿ. ಸಿದ್ಧಾರ್ಥ ಇದರ ಪ್ರವರ್ತಕರಾಗಿದ್ದು, ಹೆಚ್ಚುವರಿಯಾಗಿ ಶೇ 3.0ರಷ್ಟು ಷೇರು ಹೊಂದಿದೆ. ಹೂಡಿಕೆ ಮಾಡಿರುವ ಇತರೆ ಕಂಪನಿಗಳಲ್ಲಿ ಇಟ್ಟಿಯಂ, ಮ್ಯಾಗ್ನಸಾಫ್ಟ್ ಮತ್ತು ಗ್ಲೋಬಲ್ ಎಡ್ಜ್ ಕೂಡಾ ಸೇರಿದೆ.

No comments:
Post a Comment