ನವದೆಹಲಿ: ಶೇ.78 ರಷ್ಟು ಭಾರತೀಯರು ಬೆಳಿಗ್ಗೆ ಎದ್ದ ತಕ್ಷಣ ಸ್ಮಾರ್ಟ್ ಫೋನ್ ವೀಕ್ಷಿಸುತ್ತಾರಂತೆ. ಶೇ.28 ರಷ್ಟು ಜನರು ದಿನವೊಂದಕ್ಕೆ 11 - 25 ಬಾರಿ ಸ್ಮಾರ್ಟ್ ವೀಕ್ಷಿಸುತ್ತಾರಂತೆ. ಡಿಯೋಲಾಯ್ಟ್ ಗ್ಲೋಬಲ್ ಮೊಬೈಲ್ ಗ್ರಾಹಕ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಶೇ.78 ರಷ್ಟು ಜನರು ಬೆಳಿಗ್ಗೆ ಎದ್ದ 15 ನಿಮಿಷದಲ್ಲಿ ಸ್ಮಾರ್ಟ್ ಫೋನ್ ಬಳಸಿದರೆ ಶೇ.52 ರಷ್ಟು ಜನರು ಮಲಗುವುದಕ್ಕೂ 15 ನಿಮಿಷಗಳ ಮುನ್ನ ಸ್ಮಾರ್ಟ್ ಫೋನ್ ಬಳಕೆ ಮಾಡಿರುತ್ತಾರೆ ಎಂದು ತಿಳಿದುಬಂದಿದೆ.ಸ್ಮಾರ್ಟ್ ಫೋನ್ ನನ್ನು ಕೈಗೆತ್ತಿಕೊಂಡ ಕೂಡಲೇ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ. ನಂತರ ಈ-ಮೇಲ್ ಹಾಗೂ ಎಸ್ಎಂಎಸ್ ಗಳನ್ನು ಗಮನಿಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಇ- ಕಾಮರ್ಸ್ ಹಾಗೂ ಮೊಬೈಲ್ ಕಾಮರ್ಸ್ ಗೆ ಬೇಡಿಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್ ಫೋನ್ ಗಳಲ್ಲಿ ಡೇಟಾ ಬೇಡಿಕೆಯೂ ಹೆಚ್ಚಿದ್ದು ಮೊಬೈಲ್ ಕಂಪನಿಗಳಿಗೆ ಇದರಿಂದ ಲಾಭ ಉಂಟಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಕಳೆದ ಎರಡು ವರ್ಷಗಳಲ್ಲಿ ಎಸ್ಎಂಎಸ್ ಕಳಿಸುವುದು ಶೇ.20 ರಷ್ಟು ಕಡಿಮೆಯಾಗಿದ್ದು ಇನ್ಸ್ ಟೆಂಟ್ ಮೆಸೇಜಿಂಗ್ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ ಎಂದು ಅಧ್ಯಯನ ವರದಿಯಿಂದ ತಿಳಿದುಬಂದಿದೆ.
Wednesday, November 11, 2015
ಶೇ.78 ರಷ್ಟು ಭಾರತೀಯರು ಬೆಳಿಗ್ಗೆ ಎದ್ದ ಕೂಡಲೇ ಸ್ಮಾರ್ಟ್ ಫೋನ್ ವೀಕ್ಷಿಸುತ್ತಾರೆ!
ನವದೆಹಲಿ: ಶೇ.78 ರಷ್ಟು ಭಾರತೀಯರು ಬೆಳಿಗ್ಗೆ ಎದ್ದ ತಕ್ಷಣ ಸ್ಮಾರ್ಟ್ ಫೋನ್ ವೀಕ್ಷಿಸುತ್ತಾರಂತೆ. ಶೇ.28 ರಷ್ಟು ಜನರು ದಿನವೊಂದಕ್ಕೆ 11 - 25 ಬಾರಿ ಸ್ಮಾರ್ಟ್ ವೀಕ್ಷಿಸುತ್ತಾರಂತೆ. ಡಿಯೋಲಾಯ್ಟ್ ಗ್ಲೋಬಲ್ ಮೊಬೈಲ್ ಗ್ರಾಹಕ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಶೇ.78 ರಷ್ಟು ಜನರು ಬೆಳಿಗ್ಗೆ ಎದ್ದ 15 ನಿಮಿಷದಲ್ಲಿ ಸ್ಮಾರ್ಟ್ ಫೋನ್ ಬಳಸಿದರೆ ಶೇ.52 ರಷ್ಟು ಜನರು ಮಲಗುವುದಕ್ಕೂ 15 ನಿಮಿಷಗಳ ಮುನ್ನ ಸ್ಮಾರ್ಟ್ ಫೋನ್ ಬಳಕೆ ಮಾಡಿರುತ್ತಾರೆ ಎಂದು ತಿಳಿದುಬಂದಿದೆ.ಸ್ಮಾರ್ಟ್ ಫೋನ್ ನನ್ನು ಕೈಗೆತ್ತಿಕೊಂಡ ಕೂಡಲೇ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ. ನಂತರ ಈ-ಮೇಲ್ ಹಾಗೂ ಎಸ್ಎಂಎಸ್ ಗಳನ್ನು ಗಮನಿಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಇ- ಕಾಮರ್ಸ್ ಹಾಗೂ ಮೊಬೈಲ್ ಕಾಮರ್ಸ್ ಗೆ ಬೇಡಿಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್ ಫೋನ್ ಗಳಲ್ಲಿ ಡೇಟಾ ಬೇಡಿಕೆಯೂ ಹೆಚ್ಚಿದ್ದು ಮೊಬೈಲ್ ಕಂಪನಿಗಳಿಗೆ ಇದರಿಂದ ಲಾಭ ಉಂಟಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಕಳೆದ ಎರಡು ವರ್ಷಗಳಲ್ಲಿ ಎಸ್ಎಂಎಸ್ ಕಳಿಸುವುದು ಶೇ.20 ರಷ್ಟು ಕಡಿಮೆಯಾಗಿದ್ದು ಇನ್ಸ್ ಟೆಂಟ್ ಮೆಸೇಜಿಂಗ್ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ ಎಂದು ಅಧ್ಯಯನ ವರದಿಯಿಂದ ತಿಳಿದುಬಂದಿದೆ.
Subscribe to:
Post Comments (Atom)
No comments:
Post a Comment