ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಜಾಗತಿಕ ಮಟ್ಟದ ಯುವಜನ ಮೇಳದಲ್ಲಿ ಇಂದು ಸಂಜೆ ಏರ್ಪಡಿಸಲಾಗಿದ್ದ ಮಹಿಳಾದಿನದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಗೃಹ ಸಚಿವ ಜಿ.ಪರಮೇಶ್ವರ್ ಅವರ ಪರವಾಗಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವರ್ಣರಂಜಿತವಾಗಿ ನಡೆದ ಈ ಸಮಾರಂಭದಲ್ಲಿ ಭಗವಾನ್ ಸತ್ಯ ಸಾಯಿಬಾಬಾರವರ ಸಂಕಲ್ಪವನ್ನು ಚತ್ತೀಸ್‍ಗಢದ ರಾಯಪುರದಲ್ಲಿ ಮಕ್ಕಳ ಹೃದಯ ಶಸ್ತ್ರಚಿಕಿತ್ಸಾಲಯದ ರೂವಾರಿಗಳಾದ ಸಿ.ಶ್ರೀನಿವಾಸ್ ಅವರು ಬಾಬಾರವರ ಕಾರ್ಯರೂಪದ ಪ್ರೇಮ ಎಂಬ ವಿಚಾರವಾಗಿ ಉಪನ್ಯಾಸ ಮಾಡಿದರು. ಜಗತ್ತನ್ನೇ ತಲ್ಲಣ ಗೊಳಿಸಿದ ಮಲಾಲಾ ಪ್ರಕರಣದ ಬಗ್ಗೆ ಬೆಳಕುಚೆಲ್ಲಿ ಇಂದಿನ ಆಧಾರ ರಹಿತ ಜೀವನಶೈಲಿ ಯಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಸಂತೃಪ್ತ, ಸಾರ್ಥಕ ಜೀವನವನ್ನು ನಡೆಸಬೇಕಾದರೆ ಮೌಲ್ಯಗಳಿಗೆ ಮಾರುಹೋಗಬೇಕಾದ ಅನಿವಾರ್ಯತೆಯನ್ನು ಆಧಾರ ಸಹಿತವಾಗಿ ಪ್ರಸ್ತುತಪಡಿಸಿ ಯುವಜನರನ್ನು ಹುರಿದುಂಬಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಜಪಾನ್, ಮಲೇಷಿಯಾ, ಸ್ಲೋವೆನಿಯಾ ಮೊದಲಾದ ಐದು ದೇಶಗಳ ವನಿತೆಯರು ವೇದ ಪಠಣಮಾಡಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ಒದಗಿಸಿದ್ದು, ನಮ್ಮ ಸಂಸ್ಕೃತಿಯನ್ನು ಅರ್ಥೈಸಿಕೊಂಡು ಭಾಗಿಯಾಗಿದ್ದು ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ಅನಂತಪುರಂನ ವಿದ್ಯಾನಿಕೇತನದ ಹಿರಿಯ ವಿದ್ಯಾರ್ಥಿನಿಯರ ಬಳಗದಿಂದ ಸಿದ್ಧಪಡಿಸಿದ ಧ್ವನಿಸಾಂದ್ರಿಕೆಯ ಪ್ರಥಮ ಸಂಚಿಕೆಯನ್ನು ಶಾಸಕ ಸುಧಾಕರ್ ಬಿಡುಗಡೆ ಗೊಳಿಸಿದರು.
ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಸಾಂಸ್ಕೃತಿಕ ವಿನೋದಾವಳಿಗಳು ಏರ್ಪಡಿಸಲಾಗಿದ್ದು, ಇಟಲಿಯ ಪ್ರಸಿದ್ಧ ನೃತ್ಯಕಲಾವಿದೆ ಕಿಯಾರಾ ಅವರಿಂದ ಒಡಿಸ್ಸೀ ನೃತ್ಯ, ಸಿಂಗಪುರದ ಖ್ಯಾತ ಕಲಾವಿದೆ ರೋಷನಿ ಪಿಳ್ಲೈ ಅವರಿಂದ ಭರತನಾಟ್ಯ, ಅನಂತಪುರಂನ ಹಿರಿಯ ವಿದ್ಯಾರ್ಥಿನಿಯರಿಂದ ನೆರಳು ಬೆಳಕಿನಾಟ ಮೊದಲಾದ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು.
ಈ ಕಾರ್ಯಕ್ರಮದಲ್ಲಿ ವಿ.ಕುಮಾರ್, ಸಂಸ್ಥೆಯ ಪದಾಧಿಕಾರಿಗಳಾದ ಉಳುವಾನ ಗೋವಿಂದ ಭಟ್, ಮಾದಕಟ್ಟೆ ಈಶ್ವರ ಭಟ್, ಬನ್ಯಂಗಳ ನಾರಾಯಣರಾವ್, ಬಿ.ಎನ್.ನರಸಿಂಹ ಮೂರ್ತಿ, ಸಿ.ಶ್ರೀನಿವಾಸ್, ಸ್ವಾಮಿ ಬೋಧಮಯಾನಂದ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕುಮಾರಿ ಭುವನಾ ನಿರೂಪಿಸಿದರು.
No comments:
Post a Comment