ಬೆಂಗಳೂರು: ಅಕ್ಟೋಬರ್ ತಿಂಗಳಲ್ಲಿ ವಿಶ್ವ ಸ್ತನ ಕ್ಯಾನ್ಸರ್ ಅರಿವಿನ ಮಾಸವಾಗಿದ್ದು ಫಿಲಿಪ್ಸ್ ಹೆಲ್ತ್ ಕೇರ್ ಇಂಡಿಯಾ, ಎಸಿ ನೀಲ್ಸನ್‍ನೊಂದಿಗೆ ಸಮೀಕ್ಷೆಯೊಂದನ್ನು ನಡೆಸಿದ್ದು ಹೃದಯರೋಗ, ಸಾಂಕ್ರಾಮಿಕ ರೋಗಗಳು ಮತ್ತು ಚಯಾಪಚಯ ಸಂಬಂಧಿ ರೋಗಗಳಿಗೆ ಹೋಲಿಸಿದರೆ ಕ್ಯಾನ್ಸರ್ ಏಕೈಕ ಆತಂಕಕಾರಿ ರೋಗವೆನಿಸಿದೆ. ಆದರೆ ಪ್ರತಿಕ್ರಿಯಿಸಿದ ಶೇ.84ರಷ್ಟು ಮಂದಿ ಕ್ಯಾನ್ಸರ್‍ಗೆ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬ ಅರಿವು ಹೊಂದಿದ್ದಾರೆ. ಶೇ.36ರಷ್ಟು ಮಂದಿ ಕ್ಯಾನ್ಸರ್‍ಗೆ ವಿವಿಧ ಬಗೆಯ ಚಿಕಿತ್ಸೆಗಳು ಲಭ್ಯವಿವೆ ಎಂದು ಅರಿತಿದ್ದಾರೆ.
ಸಮೀಕ್ಷೆಯ ಫಲಿತಾಂಶಗಳ ಪ್ರಕಾರ ಕ್ಯಾನ್ಸರ್ ಭಾರತದಲಿ ಶೇ.8ರಷ್ಟು ಸಾವುಗಳಿಗೆ ಕಾರಣವಾಗಿದ್ದು ಪುರುಷರಲ್ಲಿ ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್ ಕ್ಯಾನ್ಸರ್ ಸಾವುಗಳಿಗೆ ಕಾರಣವಾಗಿದ್ದರೆ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್‍ಗಳು ಸ್ತ್ರೀಯರಲ್ಲಿ ಸಾವುಗಳಿಗೆ ಕಾರಣವಾಗಿವೆ. ಈ ಸಮೀಕ್ಷೆಯಲ್ಲಿ ಕ್ಯಾನ್ಸರ್ ಕುರಿತು ಕಾಳಜಿ ವ್ಯಕ್ತವಾಗಿದ್ದು ಶೇ.58ರಷ್ಟು ಮಂದಿ ಹಲವು ಬಗೆಯ ಕ್ಯಾನ್ಸರ್ ಮುನ್ಸೂಚನೆಗಳ ಕುರಿತು ಅರಿವನ್ನೇ ಹೊಂದಿಲ್ಲ. ಮುನ್ನಚ್ಚರಿಕೆಯ ಗುರುತುಗಳೆಂದರೆ ಗಡ್ಡೆ ಅತ್ಯಂತ ಪ್ರಮುಖ ಮುನ್ಸೂಚನೆಯಾಗಿದ್ದು ಇದರ ನಂತರ ಗುಣವಾಗದ ಊತವುಂಟಾಗುತ್ತದೆ. ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ ಶೇ.85ರಷ್ಟು ಮಂದಿ ಚಿಕಿತ್ಸೆ ಅತ್ಯಂತ ದುಬಾರಿ ಎಂದು ಅಭಿಪ್ರಾಯ ನೀಡಿದ್ದಾರೆ. ಸಕಾಲಕ್ಕೆ ಬಹಳಷ್ಟು ಮಂದಿ ಚಿಕಿತ್ಸೆ ಪಡೆಯದೇ ಇರುವುದರಿಂದ ಅವರ ಪರಿಸ್ಥಿತಿ ಬಿಗಡಾಯಿಸಿರುತ್ತದೆ.
ಶ್ರೀ ಶಂಕರ್ ಕ್ಯಾನ್ಸರ್ ಫೌಂಡೇಷನ್‍ನ ಮ್ಯಾನೇಜಿಂಗ್ ಟ್ರಸ್ಟೀ ಡಾ.ಬಿ.ಎಸ್.ಶ್ರೀನಾಥ್, `ಕ್ಯಾನ್ಸರ್ ಅನ್ನು ಮೊದಲೇ ಕಂಡುಹಿಡಿದರೆ ಗುಣಪಡಿಸಬಹುದು ಎಂದು ಜನರು ಅರ್ಥ ಮಾಡಿಕೊಳ್ಳುವುದು ಅಗತ್ಯ. ಬಹಳಷ್ಟು ಬಗೆಯ ಕ್ಯಾನ್ಸರ್‍ಗಳು ಇಂದಿಗೂ ಗುಣಪಡಿಸಬಹುದು. ಈ ನಿಟ್ಟಿನಲ್ಲಿ ಸುಧಾರಿತ ವೈದ್ಯಕೀಯ ತಂತ್ರಜ್ಞಾನಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಕ್ಯಾನ್ಸರ್ ಮತ್ತು ಅದರ ಮುನ್ಸೂಚನೆಗಳ ಕುರಿತು ಜನರಲ್ಲಿ ಅಜ್ಞಾನವಿರುವುದು ನಿಜಕ್ಕೂ ಆತಂಕದ ವಿಚಾರ. ಪ್ರಾರಂಭಿಕ ಹಂತದಲ್ಲೇ ರೋಗವನ್ನು ಕಂಡುಹಿಡಿದು ಸೂಕ್ತ ಚಿಕಿತ್ಸೆ ಪಡೆಯುವ ಕುರಿತು ಅರಿವನ್ನು ಹೆಚ್ಚಿಸಲು ಎಲ್ಲ ಬಗೆಯ ಪ್ರಯತ್ನಗಳನ್ನೂ ನಡೆಸುತ್ತಿದ್ದೇವೆ. ಇದರಿಂದ ರೋಗದ ಗಂಭೀರ ಪರಿಣಾಮ ಕಡಿಮೆ ಮಾಡಿ ಉತ್ತಮ ಫಲಿತಾಂಶ ಪಡೆಯಬಹುದು’ ಎಂದರು.
ವಿವಿಧ ಬಗೆಯ ಕ್ಯಾನ್ಸರ್‍ಗಳ ಕುರಿತಂತೆ ಈ ಸಮೀಕ್ಷೆಯಲ್ಲಿ ತಿಳಿದಿರುವುದೇನೆಂದರೆ, ಇತರೆ ಕ್ಯಾನ್ಸರ್‍ಗಳಿಗೆ ಹೋಲಿಸಿದರೆ ಜನರು ಸ್ತನ, ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ಕುರಿತು ಅರಿವನ್ನು ಹೊಂದಿದ್ದಾರೆ. ಅಲ್ಲದೆ ಕ್ಯಾನ್ಸರ್ ನಿಷೇಧಕಾರಕ ಎಂದು ಶೇ.75ರಷ್ಟು ಮಂದಿ ನಂಬಿದ್ದಾರೆ. ಆದರೆ ಶೇ.78ರಷ್ಟು ಮಂದಿ ಖ್ಯಾತನಾಮರು ಅವರ ವೈಯಕ್ತಿಕ ಅನುಭವ ಕುರಿತು ಮಾತನಾಡುವುದನ್ನು ಕಂಡಾಗ ಈ ರೋಗ ಕುರಿತು ಮುಕ್ತ ಮನಸ್ಸು ಹೊಂದಿದ್ದು ಚಿಕಿತ್ಸೆ ಪಡೆದು ಸಹಜ ಜೀವನ ನಡೆಸಲು ಉತ್ತೇಜನ ದೊರೆತಿದೆ ಎಂದು ಭಾವಿಸಿದ್ದಾರೆ.
ಈ ಸಮೀಕ್ಷೆಯನ್ನು ಭಾರತದ 15 ಮುಂಚೂಣಿಯ ಮೆಟ್ರೋಗಳು ಮತ್ತು ಮೆಟ್ರೋಗಳಲ್ಲದ(ದೆಹಲಿ, ಕೊಲ್ಕತಾ, ಮುಂಬೈ, ಪುಣೆ, ಅಹಮದಾಬಾದ್, ಚೆನ್ನೈ, ಬೆಂಗಳೂರು, ಹೈದರಾಬಾದ್, ಲಖನೌ, ಚಂಡೀಗಢ, ಗೌಹಾಟಿ, ಪಾಟ್ನಾ, ಇಂದೋರ್, ಕೊಚ್ಚಿ ಮತ್ತು ವೈಜಾóಗ್) ನಗರಗಳಲ್ಲಿ 3000 ಜನರನ್ನು ನಡೆಸಲಾಗಿದೆ.
No comments:
Post a Comment