Saturday, November 14, 2015

ಮಧುಮೇಹ ರೋಗಿಗಳ ಬಾಳಿಗೆ ಸಿಹಿ ನೀಡುವ ಸ್ಟೀವಿಯಾ



(ವಿಶ್ವ ಮಧುಮೇಹ ದಿನದ ಆಚರಣೆ ಸಂದರ್ಭವಾಗಿ....)

      ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎಂಬುದು ಆಧುನಿಕ ಜೀವನ ಶೈಲಿಯಿಂದ ಕೊಡುಗೆಯಾಗಿ ಬಂದಿರುವ ಒಂದು ಪಿಡುಗು ಎಂದರೆ ತಪ್ಪಾಗಲಾರದು. ಏಕೆಂದರೆ ವಿಶ್ವದಾದ್ಯಂತ ಇಂದು ಸುಮಾರು 34ಕೋಟಿ, ಭಾರತದಲ್ಲಿ 6ಕೋಟಿಗೂ ಹೆಚ್ಚು ಜನರು ಈ ಕಾಯಿಲೆಯಿಂದ ಬಳಲುತ್ತಿದ್ದು, ಈ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿರುವುದು ಆತಂಕ ತರುವ ವಿಷಯ.     
       ಚಿಕ್ಕವಯಸ್ಸಿನ ಮಕ್ಕಳಿಂದ ಹಿಡಿದು ಯುವಕರು, ವಯೋವೃದ್ಧರನ್ನು ಕಾಡುತ್ತಿರುವ ಈ ಕಾಯಿಲೆಯಿಂದಾಗಿ ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು 10ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ಒಮ್ಮೆ ಈ ರೋಗಕ್ಕೆ ತುತ್ತಾದವರು ಸಿಹಿಯನ್ನು ದೂರವಿರಿಸಿ ಬಾಳೆಲ್ಲಾ ಕಹಿಯ ಅನುಭವದಿಂದ ನರಳಬೇಕಾಗಿರುವುದು ಮತ್ತಷ್ಟು ಖೇದ ತರುವ ಸಂಗತಿಯಾಗಿದೆ. 
      ಮೊದಲೆಲ್ಲ ಸಾಮನ್ಯವಾಗಿ 40ವರ್ಷ ದಾಟಿದವರಲ್ಲಿ, ಅತಿಯಾದ ದೇಹದ ತೂಕ ಹೊಂದಿರುವವರಲ್ಲಿ ಮಧುಮೇಹದ ತೊಂದರೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಿಂದಾಗಿ ಇದೀಗ ಸಣ್ಣಮಕ್ಕಳು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆಂಬುದು ವೈದ್ಯಕೀಯ ಸಂಶೋಧನೆಗಳಿಂದ ಧೃಡಪಟ್ಟಿದೆ. 
      ನಾಗರೀಕತೆಯ ಸೋಗಿನಲ್ಲಿ ನಾವಿಂದು ನೈಸರ್ಗಿಕವಾದ ಆಹಾರಗಳನ್ನು ದೂರತಳ್ಳಿ ಕೃತಕ, ಸಂಸ್ಕರಿತ ಆಹಾರದ ಮಾರು ಹೋಗುತ್ತಿದ್ದೇವೆ. ದೈಹಿಕವಾದ ಚಟುವಟಿಕೆಯನ್ನು ಕಡಿಮೆ ಮಾಡಿ ಆಲಸ್ಯದ ಬದುಕಿಗೆ ಜೋತು ಬೀಳುತ್ತಿರುವುದು ಎಲ್ಲ ರೋಗಗಳಿಗೆ ಮೂಲ ಕಾರಣವಾಗುತ್ತಿದೆ. ಅನುವಂಶೀಯ ಕಾರಣಗಳ ಜೊತೆಗೆ ವಿಪರೀತ ಬೊಜ್ಜು, ಸೋಮಾರಿ ಜೀವನ, ಅತಿಯಾದ ಕೃತಕ ಆಹಾರ ಸೇವನೆ, ಮದ್ಯಪಾನ, ಮಾನಸಿಕ ಒತ್ತಡ, ಮೇಧೋಜೀರಕ ಗ್ರಂಥಿಯ ಸೋಂಕುಗಳಿಂದ ಮಧುಮೇಹ ಬರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ. 
      ಮಧುಮೇಹ ನಿಯಂತ್ರಿಸಲಾಗದ ಕಾಯಿಲೆ ಎಂದೇನೂ ಅಲ್ಲ. ಶಿಸ್ತುಬದ್ಧವಾದ ಜೀವನ, ದೈಹಿಕ ವ್ಯಾಯಾಮ, ಕ್ರಮಬದ್ಧವಾದ ಆಹಾರ, ಒತ್ತಡವಿಲ್ಲದ ಬದುಕು ರೂಢಿಸಿಕೊಂಡಲ್ಲಿ ಮಧುಮೇಹ ರೋಗಿಗಳು ಕೂಡಾ ಎಲ್ಲರಂತೆ ನೆಮ್ಮದಿಯ ಜೀವನ ನಡೆಸಬಹುದಾಗಿದೆ.  
ಸ್ಟೀವಿಯಾ ಎಂಬ ನೈಸರ್ಗಿಕ ಸಿಹಿ: 
      ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ವೈದ್ಯರು ನೀಡುವ ಮೊಟ್ಟಮೊದಲ ಸಲಹೆ ಎಂದರೆ ಸಕ್ಕರೆ ಅಥವಾ ಬೆಲ್ಲದ ಸಿಹಿಯಿಂದ ದೂರವಾಗಿರಿ ಎಂಬುದಾಗಿರುತ್ತದೆ. ಹಾಗಾಗಿ ಮಧುಮೇಹಿಗಳು ಜೀವನ ಪರ್ಯಂತ ಸಿಹಿಯಿಂದ ದೂರವಾಗಿ ಕಹಿಯನ್ನು ಅನುಭವಿಸುವಂತಾಗುತ್ತದೆ. ಸಕ್ಕರೆಗೆ ಪರ್ಯಾಯವಾಗಿ ಇಂದು ಹಲವಾರು ರೀತಿಯ ಕೃತಕ ಸಿಹಿಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಅವೂ ಸಹ ಮಧುಮೇಹ ರೋಗಿಗಳಿಗೆ ಸಂಪೂರ್ಣ ಸುರಕ್ಷಿತ ಆಗಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಅಂತಹ ಕೃತಕ ಸಿಹಿಗಳು ಸಕ್ಕರೆಗಿಂತಲೂ ಹೆಚ್ಚು ಅಪಾಯಕಾರಿ ಎಂಬುದು ಸಾಬೀತಾಗಿದೆ. 
     ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಅಮೆರಿಕಾ ಮೂಲದ ತುಳಸಿ ಜಾತಿಯ ಗಿಡವಾದ ಸ್ಟೀವಿಯಾ ಅವರ ಬಾಳನ್ನು ಸಿಹಿಯಾಗಿಸುವ ಸಂತಸದ ಸುದ್ದಿಯನ್ನು ಹೊತ್ತು ತಂದಿದೆ. ಸ್ಟೀವಿಯಾ ಅದ್ಭುತ ಗಿಡಮೂಲಿಕೆಯಾಗಿದ್ದು, ಇದನ್ನು 1,500ಕ್ಕೂ ಹೆಚ್ಚು ವರ್ಷಗಳಿಂದ ಉಪಯೋಗಿಸಲಾಗುತ್ತಿದೆ. ಭಾರತವೂ ಸೇರಿದಂತೆ 150 ಕ್ಕೂ ಹೆಚ್ಚು ದೇಶಗಳಲ್ಲಿ ಸ್ಟೀವಿಯಾವನ್ನು ಅಂಗೀಕರಿಸಲಾಗಿದೆ.  
ಸ್ಟೀವಿಯಾದ ಕೆಲವು ಮುಖ್ಯ ಪ್ರಯೋಜನಗಳೆಂದರೆ:  
      ನೈಸರ್ಗಿಕವಾದ ಸ್ಟೀವಿಯಾ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ, ಮಧುಮೇಹಿಗಳು, ಸ್ಥೂಲಕಾಯರು, ಮಕ್ಕಳು ಮತ್ತು ಗರ್ಭಿಣಿಯರು ಒಳಗೊಂಡಂತೆ ಎಲ್ಲ ವಯೋಮಾನದವರಿಗೆ ಇದು ಹೊಂದಾಣಿಕೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟಗಳ ಮೇಲೆ ಪರಿಣಾಮ ಬೀರುವುದಿಲ್ಲ, ಶೂನ್ಯ ಕಾರ್ಬೋಹೈಡ್ರೇಟ್‍ಗಳು, ಶೂನ್ಯ ಗ್ಲುಟೆನ್, ಆಂಟಿ ಆಕ್ಸಡಂಟ್, ಸೂಕ್ಷ್ಮಾಣು ಪ್ರತಿರೋಧಕ, ಕ್ಯಾನ್ಸರ್ ರಹಿತ ಮತ್ತು ವಿಷ ರಹಿತವಾದ ಸ್ಟೀವಿಯಾ ಪಚನ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ. ಉದರ ಸಮಸ್ಯೆಯನ್ನು ನಿವಾರಿಸುತ್ತದೆ. ರಕ್ತನಾಳಗಳನ್ನು ಬಲಗೊಳಿಸುತ್ತವೆ. ರಕ್ತ ಹೆಪ್ಪುಗಟ್ಟುವಿಕೆಯನ್ನು ಸುಧಾರಿಸುತ್ತದೆ. ಕೋಶವನ್ನು ಮರು ಸೃಷ್ಟಿಸುತ್ತದೆ. ಚರ್ಮ ಕಾಂತಿಯನ್ನು ಹೆಚ್ಚಿಸುತ್ತದೆ. ಕುಳಿಗಳನ್ನು ತಡೆಗಟ್ಟುತ್ತದೆ ಮತ್ತು ದಂತ ಶುಚಿತ್ವವನ್ನು ಸುಧಾರಿಸುತ್ತದೆ, ಇದರಲ್ಲಿ ವಿಟಮಿನ್ ಸಿ, ಎ, ಝಿಂಕ್ ಇತ್ಯಾದಿ ಒಳಗೊಂಡಿರುತ್ತದೆ. ಸ್ಟೀವಿಯಾವನ್ನು ನಿಯತವಾಗಿ ಬಳಸುತ್ತಿದ್ದರೆ ಡಯಾಬಿಟಿಸ್‍ನನ್ನು ನಿಯಂತ್ರಣಗೊಳಿಸಿ ಮತ್ತು ಅಧಿಕ ರಕ್ತದೊತ್ತಡ ಮಟ್ಟಗಳನ್ನು ಕಡಿಮೆಗೊಳಿಸಿ ಹೆಚ್ಚು ಇನ್ಸುಲಿನ್‍ನನ್ನು ಉತ್ಪಾದಿಸಲು ಮೆದೋಜ್ಜಿರಕದ (ಪ್ಯಾಂಕ್ರಿಯಾಸ್) ಬೀಟಾ ಕೋಶಗಳನ್ನು ಪುನ:ಶ್ಚೇತನಗೊಳಿಸುತ್ತದೆ. 
   ಸಕ್ಕರೆಗೆ ಇದೊಂದು ಆರೋಗ್ಯಕರ ಪರ್ಯಾಯ ವಸ್ತುವಾಗಿರುವುದರಿಂದ ಸ್ಟೀವಿಯಾ ಉತ್ಪನ್ನಗಳನ್ನು ಬಿಸಿ ಮತ್ತು ತಣ್ಣನೆಯ ಪೇಯಗಳೆರಡರಲ್ಲಿ, ಖಾದ್ಯ ಮತ್ತು ಬೇಕಿಂಗ್ ಉಪಯೋಗಗಳಿಗೆ, ಸಿಹಿ ತಿಂಡಿಗಳು, ಐಸ್ ಕ್ರೀಮ್‍ಗಳು ಮತ್ತು ಮಿಠಾಯಿಗಳು ಇತ್ಯಾದಿಗೆ ಬಳಸಬಹುದಾಗಿದೆ. ಜಾಗತಿಕ ಸಿಹಿ ಪದಾರ್ಥಗಳ ಉದ್ಯಮದಲ್ಲಿ ಸ್ಟೀವಿಯಾ ಒಂದು ಮಹತ್ವದ ಪರಿವರ್ತನೆಯ ವಸ್ತುವಾಗಿ ಬಿಂಬಿಸಲ್ಪಡುತ್ತಿದೆ. ಸ್ಟೀವಿಯಾ ಕುರಿತು ಹೆಚ್ಚಿನ ಮಾಹಿತಿಗಾಗಿ www.steviaworld.com ಅಥವಾ 080-23621777 ಅನ್ನು ಸಂದರ್ಶಿಸಬಹುದು.

No comments:

Post a Comment