Friday, November 06, 2015

ಸ್ಟೀವಿಯಾ ಬೆಳೆಯಿಂದ ಕೃಷಿಕರ ಬಾಳಿನಲ್ಲಿ ಹೊಸಬೆಳಕು!

     ಬೆಂಗಳೂರು ಮೂಲದ ಸ್ಟೀವಿಯಾ ವರಲ್ಡ್  ಆಗ್ರೋ ಟೆಕ್ ಪ್ರ್ವೈವೇಟ್ ಲಿಮಿಟೆಡ್, ಸ್ಟೀವಿಯಾದ ಬೃಹತ್ ಪ್ರಮಾಣದ ಕೃಷಿ ಮತ್ತು ಸಂಸ್ಕರಣೆ ಕುರಿತು ಸ್ಪಷ್ಟ ದೃಷ್ಟಿಕೋನ ಹೊಂದಿರುವ ಕೃಷಿ ತಂತ್ರಜ್ಞಾನ ಸಂಸ್ಥೆಯಾಗಿದ್ದು, ಸಮೃದ್ಧ ಲಾಭಾಂಶಗಳನ್ನು ನೀಡುವ ಔಷಧೀಯ ಗಿಡವಾದ ಸ್ಟೀವಿಯಾ ಕೃಷಿ ಬಗ್ಗೆ ಕೃಷಿಕರನ್ನು ಆಕರ್ಷಿಸಲು ಇದೇ 19 ರಿಂದ 22 ನವೆಂಬರ್‍ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಕೃಷಿ ಮೇಳದಲ್ಲಿ ‘ಸ್ಟೀವಿಯಾ ಉತ್ಸವ’ ಏರ್ಪಡಿಸಿದೆ.               ಸ್ಟೀವಿಯಾ ಬೇಸಾಯದಿಂದ ಒಬ್ಬ ರೈತ ಪ್ರತಿ ವರ್ಷ ಒಂದು ಏಕರೆ ಪ್ರದೇಶದಲ್ಲಿ ಒಂದು ಲಕ್ಷ ರೂಪಾಯಿವರೆಗೆ ಆದಾಯ ಗಳಿಸಬಹುದಾಗಿದೆ. ಈ ಔಷಧೀಯ ಗಿಡಕ್ಕೆ ಸಿದ್ಧ ಮಾರುಕಟ್ಟೆ ಇದೆ ಹಾಗೂ ಇತರ ಬೆಳೆಗಳಿಗೆ ಅಗತ್ಯವಾಗಿರುವಂತೆ ಗಮನ ನೀಡುವ ಅಗತ್ಯವಿರುವುದಿಲ್ಲ.
          ಈ ಸಂಸ್ಥೆಯು ಗುತ್ತಿಗೆ ತೋಟಗಾರಿಕೆ, ಅದರ ಪ್ರಯೋಜನಗಳು, ಮಾಡಬೇಕಾದುದು ಮತ್ತು ಮಾಡಬಾರದುದು ಇವುಗಳ ಬಗ್ಗೆ ಬೆಳಕು ಚೆಲ್ಲಲ್ಲು ಜಾಗೃತಿ ಶಿಬಿರವನ್ನು ಆಯೋಜಿಸುತ್ತಿದೆ. ಈ ಗುತ್ತಿಗೆ ತೋಟಗಾರಿಕೆ ನಮೂನೆಯಲ್ಲಿ ಸಸಿ ಗಿಡಗಳನ್ನು ರೈತರಿಗೆ ಪೂರೈಸಿ, ನೆಡುವಿಕೆಯಿಂದ ಕೊಯ್ಲುವರೆಗೆ ವಿವರವಾದ ತರಬೇತಿಯನ್ನು ಒದಗಿಸಲಾಗುತ್ತದೆ, ಸ್ಥಳೀಯ ಸೌಲಭ್ಯಗಳಿಗೆ ಅನುಗುಣವಾಗಿ ಭೂಮಿಯನ್ನು ಸಜ್ಜುಗೊಳಿಸುವಿಕೆ, ಫಲೀಕರಣ ಮತ್ತು ಗಿಡ ನಿರ್ವಹಣೆ ಕುರಿತು ಸಲಹೆ ನೀಡಲಾಗುತ್ತದೆ ಹಾಗೂ ಗುಣಮಟ್ಟದ ಆವರಣದ ಆಧಾರದ ಮೇಲೆ ಪೂರ್ವ ನಿರ್ಧರಿತ ದರದಲ್ಲಿ ಎಲ್ಲ ಉತ್ಪನ್ನಗಳನ್ನು ವಾಪಸ್ ಖರೀದಿಸಲಾಗುತ್ತದೆ.
         ಇದರ ಪ್ರಯೋಜನಗಳ ಮೇಲೆ ಬೆಳಕು ಚೆಲ್ಲಲ್ಲು ಸ್ಟೀವಿಯಾ ವಲ್ರ್ಡ್ ಆಗ್ರೋ ಟೆಕ್ ಪ್ರ್ವೈವೇಟ್ ಲಿಮಿಟೆಡ್, ಉತ್ಸವವನ್ನು ಆಯೋಜಿಸಿದ್ದು, ಸ್ಟೀವಿಯಾವನ್ನು ಬಳಸಿಕೊಂಡು ಜೀವನ ಶೈಲಿ ಉತ್ಪನ್ನಗಳ ತಯಾರಿಕೆಯನ್ನು ತೋರಿಸಲಾಗುತ್ತದೆ. ಇದಲ್ಲದೇ ರುಚಿ ನೋಡುವ ಪ್ರಯೋಗ ಮತ್ತು ಜಾಗೃತಿ ಶಿಬಿರವನ್ನು ಸಹ ಏರ್ಪಸಿಲಾಗುತ್ತದೆ. ಉತ್ಸವದಲ್ಲಿ ಸ್ಟೀವಿಯಾ ವಲ್ರ್ಡ್ ಆಗ್ರೋ ಟೆಕ್ ಸಂಸ್ಥೆಯು ಸ್ಟೀವಿಯಾದಿಂದ ತಯಾರಿಸಲಾದ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ ಹಾಗೂ ಈ ಗಿಡಮೂಲಿಕೆಯಿಂದ ತಯಾರಿಸಲಾದ ಕೇಕ್, ಚಾಕೋಲೆಟ್, ಕೂಕ್ಕಿ, ಚಹಾ ಇತ್ಯಾದಿಯನ್ನು ಇದು ಒಳಗೊಂಡಿರುತ್ತದೆ.
       ಸ್ಟೀವಿಯಾ ದಕ್ಷಿಣ ಅಮೆರಿಕದ ಅದ್ಭುತ ಗಿಡಮೂಲಿಕೆಯಾಗಿದ್ದು, ಇದನ್ನು 1,500 ವರ್ಷಗಳಿಂದ ಉಪಯೋಗಿಸಲಾಗುತ್ತಿದೆ. ಭಾರತ (ಎಫ್‍ಎಸ್‍ಎಸ್‍ಎಐ) ಸೇರಿದಂತೆ 150 ಕ್ಕೂ ಹೆಚ್ಚು ದೇಶಗಳಲ್ಲಿ ಸ್ಟೀವಿಯಾವನ್ನು ಅಂಗೀಕರಿಸಲಾಗಿದೆ. ಸ್ಟೀವಿಯಾದ ಕೆಲವು ಮುಖ್ಯ ಪ್ರಯೋಜನಗಳೆಂದರೆ : ನೈಸರ್ಗಿಕ, ಅಡ್ಡ ಪರಿಣಾಮಗಳಿಲ್ಲ, ಮಧುಮೇಹಿಗಳು, ಸ್ಥೂಲಕಾಯರು, ಮಕ್ಕಳು ಮತ್ತು ಗರ್ಭಿಣಿಯರು ಒಳಗೊಂಡಂತೆ ಎಲ್ಲ ವಯೋಮಾನದ ಗುಂಪುಗಳಿಗೆ ಹೊಂದಾಣಿಕೆಯಾಗುತ್ತದೆ, ಸಕ್ಕರೆ ಅಥವಾ ಇತರ ಕೃತಕ ಸಿಹಿ ಪದಾರ್ಥಗಳಂತೆ ಮೂತ್ರಪಿಂಡಕ್ಕೆ ಅಡ್ಡ ಪರಿಣಾಮ ಇರುವುದಿಲ್ಲ, ಶೂನ್ಯ ಕ್ಯಾಲೋರಿ, ಶೂನ್ಯ ಗ್ಲೈಸಿಮಿಕ್ ಇಂಡೆಕ್ಸ್ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟಗಳ ಮೇಲೆ ಪರಿಣಾಮ ಬೀರುವುದಿಲ್ಲ, ಶೂನ್ಯ ಕಾರ್ಬೋಹೈಡ್ರೇಟ್‍ಗಳು, ಶೂನ್ಯ ಗ್ಲುಟೆನ್, ಆಂಟಿ ಆಕ್ಸಡಂಟ್, ಸೂಕ್ಷ್ಮಾಣು ಪ್ರತಿರೋಧಕ, ಕ್ಯಾನ್ಸರ್ ರಹಿತ ಮತ್ತು ವಿಷ ರಹಿತವಾಗಿದ್ದು ಪಚನ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ, ಉದರ ಸಮಸ್ಯೆಯನ್ನು ನಿವಾರಿಸುತ್ತದೆ, ರಕ್ತನಾಳಗಳನ್ನು ಬಲಗೊಳಿಸುತ್ತವೆ, ರಕ್ತ ಹೆಪ್ಪುಗಟ್ಟುವಿಕೆಯನ್ನು ಸುಧಾರಿಸುತ್ತದೆ, ಕೋಶವನ್ನು ಮರು ಸೃಷ್ಟಿಸುತ್ತದೆ ಮತ್ತು ಚರ್ಮ ಕಾಂತಿಯನ್ನು ಹೆಚ್ಚಿಸುತ್ತದೆ, ಕುಳಿಗಳನ್ನು ತಡೆಗಟ್ಟುತ್ತದೆ ಮತ್ತು ದಂತ ಶುಚಿತ್ವವನ್ನು ಸುಧಾರಿಸುತ್ತದೆ, ಇದರಲ್ಲಿ ವಿಟಮಿನ್ ಸಿ, ಎ, ಝಿಂಕ್ ಇತ್ಯಾದಿ ಒಳಗೊಂಡಿರುತ್ತದೆ. ಸ್ಟೀವಿಯಾವನ್ನು ನಿಯಮಿತವಾಗಿ ಬಳಸುತ್ತಿದ್ದರೆ ಡಯಾಬಿಟಿಸ್‍ನನ್ನು ನಿಯಂತ್ರಣಗೊಳಿಸಿ ಮತ್ತು ಅಧಿಕ ರಕ್ತದೊತ್ತಡ ಮಟ್ಟಗಳನ್ನು ಕಡಿಮೆಗೊಳಿಸಿ ಹೆಚ್ಚು ಇನ್ಸುಲಿನ್‍ನನ್ನು ಉತ್ಪಾದಿಸಲು ಮೆದೋಜ್ಜಿರಕದ (ಪ್ಯಾಂಕ್ರಿಯಾಸ್) ಬೀಟಾ ಕೋಶಗಳನ್ನು ಪುನ:ಶ್ಚೇತನಗೊಳಿಸುತ್ತದೆ.
         ಸಕ್ಕರೆಗೆ ಇದೊಂದು ಆರೋಗ್ಯಕರ ಪರ್ಯಾಯ ವಸ್ತುವಾಗಿರುವುದರಿಂದ ಸ್ಟೀವಿಯಾ ಉತ್ಪನ್ನಗಳನ್ನು ಬಿಸಿ ಮತ್ತು ತಣ್ಣನೆಯ ಪೇಯಗಳೆರಡರಲ್ಲಿ, ಖಾದ್ಯ ಮತ್ತು ಬೇಕಿಂಗ್ ಉಪಯೋಗಗಳಿಗೆ, ಸಿಹಿ ತಿಂಡಿಗಳು, ಐಸ್ ಕ್ರೀಮ್‍ಗಳು ಮತ್ತು ಮಿಠಾಯಿಗಳು ಇತ್ಯಾದಿಗೆ ಬಳಸಬಹುದಾಗಿದೆ. ಇದು ಶೇಕಡ 100ರಷ್ಟು ನೈಸರ್ಗಿಕ ಮತ್ತು ಶೇಕಡ 100ರಷ್ಟು ಸಸ್ಯಾಹಾರ.
ಇದರಲ್ಲಿ ಔಷಧೀಯ ಮೌಲ್ಯಗಳು ಸಮೃದ್ಧವಾಗಿರುವುದರಿಂದ ಭಾರತದಲ್ಲಿ ಸ್ಟೀವಿಯಾ ‘ಸಿಹಿ ತುಳಸಿ’ ಎಂದೇ ಚಿರಪರಿಚಿತವಾಗಿದೆ. ಜಾಗತಿಕ ಸಿಹಿ ಪದಾರ್ಥಗಳ ಉದ್ಯಮದಲ್ಲಿ ಸ್ಟೀವಿಯಾ ಮಹತ್ವದ ಪರಿವರ್ತನೆಯ ವಸ್ತುವೆಂದು ಕಂಪನಿ ನಂಬಿಕೆ ಹೊಂದಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 94825 09888 / 99863 33368 / 88674 65909

No comments:

Post a Comment