ಹೊಸವರ್ಷ ಬಂದಾಗಲೆಲ್ಲ
ನಮಗೆ ಮೊದಲು ನೆನಪಾಗುವುದು ಕ್ಯಾಲೆಂಡರ್ ಅಲ್ಲವೆ?.
ವರ್ಷದಲ್ಲಿ ಹಬ್ಬ, ಹರಿದಿನಗಳು ಯಾವ
ತಿಂಗಳಿನಲ್ಲಿ, ಯಾವ ದಿನಾಂಕದಂದು
ಬರುತ್ತವೆ. ಯಾವ ದಿನಗಳಂದು ಕೆಲಸಕ್ಕೆ ರಜೆ
ಸಿಗುತ್ತದೆ ಎಂದು ಮೊದಲೇ ತಿಳಿದುಕೊಂಡು ಅದರಂತೆ ಪ್ರವಾಸ ಅಥವಾ ಇತರೆ ಯೋಜನೆ ಮಾಡಿಕೊಳ್ಳಲು
ಅದರಿಂದ ನಮಗೆ ಸಹಕಾರಿ ಆಗುವುದೇ ಅದಕ್ಕೆ ಕಾರಣ ಎಂಬುದು ಎಲ್ಲರೂ ಬಲ್ಲರು. ಆದರೆ ಸಾವಿರಾರು
ವರ್ಷಗಳ ಹಿಂದಿನ ಯಾವುದಾದರೊಂದು ಮುಖ್ಯ ಘಟನೆ ಯಾವ
ದಿನಾಂಕ ಮತ್ತು ಯಾವ ವಾರದಂದು
ನಡೆದಿತ್ತು ಎಂದು ಹೇಳುವುದು ಅಷ್ಟು ಸುಲಭದ
ಕೆಲಸವಲ್ಲ. ಹಾಗಾಗಿ ಎಲ್ಲ ಕಾಲಕ್ಕೂ ಶಾಶ್ವತವಾಗಿ ಒಂದೇ ಕ್ಯಾಲೆಂಡರ್
ಇರುವಂತಾದರೆ ಎಷ್ಟು ಚೆಂದ ಎಂಬ ಭಾವನೆ ಬಾರದೆ ಇರದು.
ಅಂತಹ ಬಹುಕ್ಲಿಷ್ಟವಾದ ಶಾಶ್ವತ ಕ್ಯಾಲೆಂಡರ್‍ಅನ್ನು
ಬೆಂಗಳೂರಿನ ಜೆಹೆಚ್‍ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಎಸ್.ಎಂ.ಅಮೀನ್ ಅವರು
ಸಂಶೋಧನೆ ಮಾಡಿ ರೂಪಿಸಿದ್ದಾರೆ. 60ವರ್ಷ ವಯಸ್ಸಿನವರಾದ ಅಮೀನ್‍ರವರು ಈ ಕಾರ್ಯಕ್ಕಾಗಿ ಸತತವಾಗಿ 7ವರ್ಷ
ಶ್ರಮಿಸಿದ್ದಾರೆ. ಅವರು ಸಿದ್ದಪಡಿಸಿರುವ ಕ್ಯಾಲೆಂಡರ್‍ನಲ್ಲಿ ಕ್ರೀಸ್ತಶಕೆ 01.01.0001 ರಿಂದ ಇಂದಿನವರೆಗೆ
ಎಲ್ಲ ವರ್ಷಗಳ ತಿಂಗಳು, ದಿನಾಂಕ, ವಾರಗಳನ್ನು
ಕಾಣಬಹುದಾಗಿದೆ. ಮುಂದೆ ಬರುವ ಕಾಲಮಾನಕ್ಕೂ ಈ ಕ್ಯಾಲೆಂಡರ್ ನಿರಂತರವಾಗಿ ಮುಂದುವರೆಯಲಿದೆ.
ಇದನ್ನು ಇಂಟರ್‍ನೆಟ್‍ನಿಂದಲೂ ಧೃಡೀಕರಿಸಿ ಕೊಳ್ಳಬಹುದಾಗಿದೆ. ಇದರ ಜೊತೆಯಲ್ಲಿಯೇ ಕ್ರೀಸ್ತ
ಪೂರ್ವ ವರ್ಷಗಳ ಕ್ಯಾಲೆಂಡರ್ ಅನ್ನು ಸಹ ಅಮೀನ್‍ರವರು ತಯಾರಿಸಿದ್ದು, ಇದರಿಂದಾಗಿ ಭೂತ, ಭವಿಷತ್ ಕಾಲದ ಎಲ್ಲ
ವರ್ಷಗಳ ದಿನಾಂಕಗಳನ್ನು ತಿಳಿಯಲು ಸಹಕಾರಿಯಾಗಲಿದೆ. ಕ್ಯಾಲೆಂಡರ್‍ನ ಸತ್ಯಾಸತ್ಯತೆಯನ್ನು
ಅಮೆರಿಕದ ಖ್ಯಾತ ಗಣಿತ ಶಾಸ್ತ್ರಜ್ಞರಾದ ಸ್ಟೀವ್ ದಿನ್ಹ್
ಅವರ ಲೆಕ್ಕಾಚಾರದ ಪ್ರಕಾರವೂ ಧೃಡೀಕರಿಸಿಕೊಳ್ಳಲಾಗಿದೆ. ಅದರ ಪ್ರಕಾರ 01.01.0001 ರಿಂದ 31.12.2015ರ ವರೆಗಿನ ಒಟ್ಟು
ದಿನಗಳು 7,35,963 ಎಂದು ತಿಳಿದು
ಬಂದಿರುತ್ತದೆ.
ಡಾ.ಎಸ್.ಎಂ.ಅಮೀನ್ ಅವರು ರೂಪಿಸಿರುವ ಈ ‘ವಿಶ್ವದ ಶಾಶ್ವತ
ಕ್ಯಾಲೆಂಡರ್’ನ ಪ್ರಕಾರ ಪ್ರವಾದಿ
ಮಹಮ್ಮದ್ ಜನಿಸಿದ್ದು ಕ್ರಿ.ಶ.571ರ ಏಪ್ರಿಲ್ 22ರಂದು ಎಂದು ತಿಳಿದು
ಬಂದಿರುತ್ತದೆ. ಅದೇರೀತಿ ಶ್ರೀರಾಮ, ಶ್ರೀಕೃಷ್ಣ, ಭಗವಾನ್ ಮಹಾವೀರ,ಗೌತಮಬುದ್ಧ, ಯೇಸು ಕ್ರಿಸ್ತ, ಗುರುನಾನಕ್ ರಂತಹ ಮಹಾ ಪುರುಷರೆಲ್ಲರು ಜನಿಸಿದ್ದು ಶುಕ್ರವಾರದಂದೇ
ಎಂಬ ಸಂಗತಿ ಬೆಳಕಿಗೆ ಬಂದಿರುತ್ತದೆ!.
ಅಮೀನ್‍ರವರು ಈ ಹಿಂದೆ 22 ಏಪ್ರಿಲ್ 2015ರಂದು ಪ್ರವಾದಿ ಮಹಮ್ಮದ್‍ನ 1444ನೇ ಜನ್ಮದಿನದ
ಪ್ರಯುಕ್ತ ಅವರ ಜೀವನದ ಮಹತ್ವದ ಘಟ್ಟಗಳ
ದಿನಾಂಕಗಳನ್ನು ಒಳಗೊಂಡ ಹೊತ್ತಿಗೆಯನ್ನು ಬಿಡುಗಡೆ ಮಾಡಿರುತ್ತಾರೆ. ಅದೇರೀತಿ ಪ್ರವಾದಿ ಮಹಮ್ಮದ್‍ರ
ಅಳಿಯ ಇಮಾಂ ಅಲಿ, ಮಗಳು ಬೀಬಿ ಫಾತಿಮಾ, ಮೊಮ್ಮಕ್ಕಳಾದ ಇಮಾಂ
ಹಸನ್ ಮತ್ತು ಇಮಾಂ ಹುಸೇನ್ ರವರ ಜೀವನದ ಮಹತ್ವದ ದಿನಾಂಕಗಳನ್ನು ಸಹ ಪ್ರಕಟಿಸಿರುತ್ತಾರೆ.
ಸೋಜಿಗದ ಸಂಗತಿ ಎಂದರೆ ಇವರೆಲ್ಲರೂ ಜನಿಸಿದ್ದು ಶುಕ್ರವಾರದಂದೇ ಎಂಬುದು ರುಜುವಾಗಿರುತ್ತದೆ.
ಶ್ರೀರಾಮನ ಜನ್ಮದಿನವನ್ನು ಅಧ್ಯಯನ ಮಾಡಲು
ಅಮೆರಿಕದಿಂದ ಪ್ಲಾನೆಟೇರಿಯಂ ಗೋಲ್ಡ್’ಎಂಬ ತಂತ್ರಾಂಶವನ್ನು ತರಿಸಿಕೊಂಡಿದ್ದು ಅದರ ಪ್ರಕಾರ ರಾಮನು
ಜನಿಸಿದ್ದು ಕ್ರಿಸ್ತಪೂರ್ವ 10.01.5114 ರಂದು ಎಂದು
ತಿಳಿದು ಬರುತ್ತದೆ. ಆದರೆ ಅದು ಯಾವ ವಾರವಾಗಿತ್ತು ಎಂದು ತಿಳಿಯಲು ಸದರಿ ತಂತ್ರಾಂಶದಲ್ಲಾಗಲಿ
ಅಥವಾ ಇನ್ನಾವುದೇ ಮೂಲದಿಂದಾಗಲಿ ತಿಳಿದು ಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಅಮೀನ್‍ರವರು
ಹೊರತಂದಿರುವ ಶಾಶ್ವತ ಕ್ಯಾಲೆಂಡರ್‍ನಿಂದ ಅದುಕೂಡ ಶುಕ್ರವಾರವಾಗಿತ್ತು ಎಂಬುದು ತಿಳಿದು ಬರುತ್ತದೆ.
ಅಮೀನ್ ಅವರ ಈ ಶಾಶ್ವತ ಕ್ಯಾಲೆಂಡರ್ ಮುಂದಿನ
ಪೀಳಿಗೆಗಳಿಗೆ ಒಂದು ವರವಾಗಲಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಚರಿತ್ರೆ ಕುರಿತು
ಸಂಶೋಧನೆಯಲ್ಲಿ ತೊಡಗಿರುವ ಹಲವಾರು ಅಂತಾರಾಷ್ರೀಯ ಸಂಸ್ಥೆಗಳು, ಪುರಾತತ್ವ
ಶಾಸ್ತ್ರಜ್ಞರು, ಇತಿಹಾಸಕಾರರು, ವಿಜ್ಞಾನಿಗಳು, ಸಂಖ್ಯಾ
ಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ಸಂಶೋಧಕರು, ಪ್ರಕಾಶಕರು ಇನ್ನೂ
ಮುಂತಾದ ಹಲವರಿಗೆ ಯಾವುದೇ ದಿನಾಂಕ, ತಿಂಗಳು, ವರ್ಷ ಮತ್ತು ವಾರವನ್ನು ನಿಖರವಾಗಿ ತಿಳಿಯಲು ಇದು ಸಹಕಾರಿಯಾಗಲಿದೆ.
ಇವುಗಳಲ್ಲಿ ಯಾವುದೇ ಮೂರು ಅಂಶಗಳು ಗೊತ್ತಿದ್ದಲ್ಲಿ ನಾಲ್ಕನೇ ಅಂಶವನ್ನು ತಿಳಿದುಕೊಳ್ಳುವುದು
ಇದರಿಂದ ಬಹಳಷ್ಟು ಸುಲಭವಾಗಲಿದೆ. ಮಹನೀಯರ ನಿಖರವಾದ ಜನ್ಮದಿನಾಂಕವನ್ನು ತಿಳಿಯುವುದರಿಂದ ಅವರ
ಜಾತಕಚಕ್ರವನ್ನು ಸಹ ಕಂಡುಹಿಡಿದು ಅದಕ್ಕೂ ಮತ್ತು
ಸದರಿ ಮಹನೀಯರ ಜೀವನದ ವಿಶೇಷಗಳಿಗೂ ತಾಳೆ ನೋಡಬಹುದಾಗಿರುತ್ತದೆ.
‘ಮಾನವ ಕುಲಕ್ಕೆ
ಬಹಳಷ್ಟು ಪ್ರಯೋಜನಕಾರಿಯಾದ ಈ ಶಾಶ್ವತ ಕ್ಯಾಲೆಂಡರ್ ವಿಶ್ವಕ್ಕೆ ತಾವು ನೀಡುತ್ತಿರುವ ಸಣ್ಣ
ಕೊಡುಗೆ ಅಷ್ಟೆ’ ಎನ್ನುತ್ತಾರೆ ಡಾ.
ಎಸ್.ಎಂ.ಅಮೀನ್.
ಡಾ. ಎಸ್.ಎಂ.ಅಮೀನ್ ಅವರ
ಕುರಿತು..
ಬೆಂಗಳೂರಿನ ಜೆಹೆಚ್‍ಎಸ್
ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ.ಎಸ್.ಎಂ.ಅಮೀನ್ ಅವರು ಮೈಸೂರು ವಿಶ್ವ ವಿದ್ಯಾನಿಲಯದಿಂದ 1977ರಲ್ಲಿ
ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದು ಉಪನ್ಯಾಸಕರಾಗಿ, ಅತಿಥಿ
ಪ್ರಾಧ್ಯಾಪಕರಾಗಿ ಹತ್ತು ವರ್ಷಗಳಿಗೂ ಹೆಚ್ಚುಕಾಲ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಸೇವೆ
ಸಲ್ಲಿಸಿರುತ್ತಾರೆ. ಭಾರತೀಯ ಭೌತಶಾಸ್ತ್ರ ಶಿಕ್ಷಕರ ಸಂಘದ ಆಜೀವ ಸದಸ್ಯರಾಗಿರುತ್ತಾರೆ. ಅದನಂತರ 1988ರಲ್ಲಿ ಭಾರತೀಯ
ಲೇಖಕರ ಐಕ್ಯ ಸಂಘದ ಆಜೀವ ಸದಸ್ಯತ್ವವನ್ನು ಗಳಿಸಿರುತ್ತಾರೆ. 1992ರಲ್ಲಿ ಇವರಿಗೆ
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ವಿಶ್ವ ವಿದ್ಯಾನಿಲಯವು ಪಿ.ಹೆಚ್.ಡಿ ಪದವಿಯನ್ನು ನೀಡಿ
ಗೌರವಿಸಿರುತ್ತದೆ. ಭೌತಶಾಸ್ತ್ರ, ವಾಸ್ತು, ಫೆಂಗ್‍ಷೂಯಿ ಕುರಿತಂತೆ ನಿರಂತರ ಅಧ್ಯಯನ ಮತ್ತು ಸಂಶೋಧನೆಯಲ್ಲಿ
ತೊಡಗಿಸಿಕೊಂಡಿರುವ ಇವರು ಹಲವಾರು ಪುಸ್ತಕಗಳನ್ನೂ ಹೊರತಂದಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ
+91 9845135286
chairman@thejhsschool.org
No comments:
Post a Comment