ಮುದ್ದೇನಹಳ್ಳಿಯ
ಸತ್ಯಸಾಯಿ ಗ್ರಾಮದಲ್ಲಿ ಇಂದು ಏರ್ಪಡಿಸಲಾಗಿದ್ದ ಜಾಗತಿಕ ಯುವ ಸಮ್ಮೇಳನದ ಉದ್ಘಾಟನಾ
ಕಾರ್ಯಕ್ರಮದಲ್ಲಿ ಅವರು ಉದ್ದೇಶ ನಿರೂಪಣೆಯನ್ನು ಮಾಡುತ್ತ ಮಾತನಾಡಿದರು.
ಮಂಜು
ಮುಸಿಕಿದ ವಾತಾವರಣ, ಜಿನುಗುವ ಮಳೆಯ ನಡುವೆ ಆಗೊಮ್ಮೆ ಈಗೊಮ್ಮೆ ಇಣುಕಿ ಮರೆಯಾಗುತ್ತಿದ್ದ
ಸೂರ್ಯನ ಭರವಸೆಯ ಬೆಳಕನ್ನು ಯುವ ನೇತಾರರ ನೇತೃತ್ವದಲ್ಲಿ ಆಶಿಸಿದಂತಿತ್ತು.
ವಿ.ಕುಮಾರ್
ಅವರ ಪ್ರಾಸ್ತಾವಿಕ ಮಾತುಗಳ ನಂತರ ಬೆಂಗಳೂರಿನ ಶ್ರೀ ರಾಮಕೃಷ್ಣ ಮಿಷನ್ ನ ಸ್ವಾಮಿ
ಬೋಧಮಯಾನಂದರು ಜ್ಯೋತಿಯನ್ನು ಬೆಳಗಿಸಿ ಯುವ ಸಮ್ಮೇಳನಕ್ಕೆ ಚಾಲನೆ ನೀಡಿದರು.
‘ಎಲ್ಲರೂ
ಒಂದಾಗಿ’ ಕಲೆತು ಶಾಂತಿ ಮತ್ತು ಪ್ರೇಮವನ್ನು ಹಂಚಿ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ
ಎನ್ನುವ ಆಶೋತ್ತರ ದೊಂದಿಗೆ ಆಯೋಜನೆಗೊಂಡ ಯುವ ಸಮ್ಮೇಳನದ ಲಾಂಛನ ಫಲಕವನ್ನು ಸತ್ಯಸಾಯಿ
ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಉಳುವಾನ ಗೋವಿಂದ ಭಟ್ಟರು ಅನಾವರಣ ಗೊಳಿಸಿದರು.
ಈ
ಕಾರ್ಯಕ್ರಮಕ್ಕೆ ಹಿನ್ನೆಲೆಯಾಗಿ ನಾನಾ ಮತಧರ್ಮಗಳನ್ನು ಪ್ರತಿನಿಧಿಸುವ ರಾಯಭಾರಿಗಳು
ಅವರವರ ಸಂಸ್ಕøತಿಯಂತೆ ಪ್ರಾರ್ಥನೆಮಾಡಿ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು.
ಇಪ್ಪತ್ತು
ದೇಶಗಳ ಪತಾಕೆಗಳೊಂದಿಗೆ ಎರಡು ಸಾವಿರ ಯುವಕ, ಯುವತಿಯರು ನಿನ್ನೆಯಷ್ಟೇ ಉದ್ಘಾಟನೆಗೊಂಡ
ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಂಗಣಕ್ಕೆ ಅತ್ಯಂತ ಶಿಸ್ತುಬದ್ಧವಾಗಿ, ವರ್ಣರಂಜಿತವಾದ
ಮೆರವಣಿಗೆಯಲ್ಲಿ ಆಗಮಿಸಿ ಎಲ್ಲರೂ ಎಲ್ಲರನ್ನೂ ಅರ್ಥೈಸಿಕೊಂಡು ಜೀವಿಸುವಂತಾದರೆ ‘ಮಾನವ
ಕುಲ ತಾನೊಂದೇ ವಲಂ’ ಎಂಬಂತಾಗಿ ಶಾಂತಿ, ಪ್ರೇಮ ತನ್ನಿಂದ ತಾನೇ ನೆಲೆಯೂರುತ್ತದೆ ಎಂಬ
ಸಂದೇಶವನ್ನು ಸಾರಿದರು.
ಈ ಸಮ್ಮೇಳನದಲ್ಲಿ ಕೊಲೆರಡೋದ ಪ್ರತಿನಿಧಿ ಯುವತಿಯರ ಪರವಗಿ ಮಾತನಾಡಿದರೆ, ಗ್ರೀಸ್ ದೇಶದ ಅಶ್ರಫ್ ಯುವಕರ ಪರವಾಗಿ ಮಾತನಾಡಿದರು. ವಿವೇಕಾನಂದ ಯೋಗ ವಿಶ್ವವಿದ್ಯಾಲಯದ
ಕುಲಪತಿ ಡಾ.ನಾಗೇಂದ್ರ ಯುವ ಸಮ್ಮೇಳನದ ಅಗತ್ಯದ ಕುರಿತು ಸಾಂದರ್ಭಿಕ ಮಾತುಗಳನ್ನಾಡಿದರೆ,
.ಸಮ್ಮೇಳನವನ್ನು ಉದ್ಘಾಟನೆ ಮಾಡಿದ ಸ್ವಾಮಿ ಬೋಧಮಯಾನಂದರು ಮಾತನಾಡುತ್ತಾ ಯುವಕರು
ಪರಿವರ್ತನೆಯ ಕಡೆಗೆ ಸಾಗಿ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುವಂತಾಗಬೇಕು ಎಂದು ಕರೆ
ನೀಡಿದರು.
ಕಾರ್ಯಕ್ರಮದಲ್ಲಿ
ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆಯ ಧರ್ಮದರ್ಶಿಗಳಾದ ಮಾದಕಟ್ಟೆ ಈಶ್ವರ ಭಟ್,
ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಮುದ್ದೇನಹಳ್ಳಿಯ ಕಾರ್ಯದರ್ಶಿಗಳಾದ ಬನ್ಯಂಗಳ ನಾರಾಯಣ
ರಾವ್, ಸತ್ಯಸಾಯಿ ಹೆಲ್ತ್ ಅಂಡ್ ಎಜುಕೇಷನ್ ಟ್ರಸ್ಟ್‍ನ ಅಧ್ಯಕ್ಷರಾದ ಸಿ.ಶ್ರೀನಿವಾಸ್
ಉಪಸ್ಥಿತರಿದ್ದರು.
ಸತ್ಯಸಾಯಿ ಪ್ರೇಮಾಮೃತ ಪ್ರಕಾಶನದ ಮುಖ್ಯಸ್ಥರಲ್ಲಿ ಒಬ್ಬರಾದ ಕುಮಾರಿ ಭುವನ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.
No comments:
Post a Comment