ಬೆಂಗಳೂರು: ನಗರದ ಕುಮಾರಕೃಪ ರಸ್ತೆಯಲ್ಲಿನ ಚಿತ್ರಕಲಾ ಪರಿಷತ್‍ನಲ್ಲಿ ಸೋಮವಾರ ಪ್ರಾರಂಭವಾದ 'ವಸ್ತ್ರ ಸಿಂಚನ'ಪ್ರದರ್ಶನವು ಸಂದರ್ಶಕರ ಮನ ಸೂರೆಗೊಳ್ಳುತ್ತಿದೆ. ಮೇಯರ್ ಬಿ.ಎನ್.ಮಂಜುನಾಥ ರೆಡ್ಡಿ ಅವರು ಈ ಪ್ರದರ್ಶನವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಿಬಿಎಂಪಿ ಕಾರ್ಪೊರೇಟರ್ ಮಂಜುನಾಥ್,ಚಿತ್ರ ನಟಿ ದೀಪಿಕಾ ದಾಸ್ ಅವರು ಕಲರ್ಸ್ ಆಫ್ ಇಂಡಿಯಾ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು ಈ ಮೇಳವು 9ನೇ ನವೆಂಬರ್ ನಿಂದ 18ನೇ ನವೆಂಬರ್ 2015ರ ತನಕ ನಡೆಯಲಿದೆ. ಮೇಳದಲ್ಲಿ ಭಾರತದ ವಿವಿಧ ಭಾಗಗಳ ಗ್ರಾಮೀಣ ಕುಶಲಕರ್ಮಿಗಳನ್ನು ಒಟ್ಟು ಸೇರಿಸಲಿದೆ. ಹಾಂಡ್‍ಲೂಮ್‍ಗಳು, ರೇಷ್ಮೆ ಮತ್ತು ಹತ್ತಿ, ಶುದ್ಧ ರೇಷ್ಮೆ ಸೀರೆಗಳು, ಆಭರಣಗಳು, ಹಿತ್ತಾಳೆ ವಸ್ತುಗಳು, ತಂಜಾವೂರು ಪೈಂಟಿಂಗ್ ಇತ್ಯಾದಿ 50ಕ್ಕೂ ಹೆಚ್ಚು ಮಳಿಗೆಗಳು ಮತ್ತು ಭಾರತದಾದ್ಯಂತದ 150ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಿತ್ತಿದ್ದಾರೆ.
ವರ್ಣಮಯ ಕರಕುಶಲ ಉತ್ಪನ್ನಗಳು ವಸ್ತ್ರ ಸಿಂಚನದ ಆಕರ್ಷಣೆಯಾಗಿದ್ದು, ಇದು ಭಾರತದ ವಿವಿಧ ಭಾಗಗಳ ಗ್ರಾಮೀಣ ಕುಶಲಕರ್ಮಿಗಳನ್ನು ಒಟ್ಟುಗೂಡಿಸಿದೆ. ಪ್ರದರ್ಶನವು ಬೆಳ್ಳಿ ಆಭರಣ, ಸೆಣಬಿನ ಚಪ್ಪಲಿಗಳು ಮತ್ತು ಜವಳಿಗಳನ್ನು ಒಳಗೊಂಡಿದ್ದವು. ಮೇಳವು ಸಮಕಾಲೀನ ಜೀವನಶೈಲಿ ಉತ್ಪನ್ನಗಳ ರಚನೆಗಾಗಿ ಸಾಂಪ್ರದಾಯಿಕ ಕ್ರಾಫ್ಟ್ ಕೌಶಲ್ಯಗಳ ಬಳಕೆಯನ್ನು ಬಿಂಬಿಸಲಿದೆ. ಪಲ್ಲುಗಳು ಸೆಣಬು ಮತ್ತು ಚಿನ್ನದ ಕೈರಿಸ್‍ಗಳಿಂದ ಅಲಂಕೃತಗೊಂಡಿರುತ್ತವೆ. ಉಡುಗೊರೆ ಉತ್ಪನ್ನಗಳು ಮೇಳದಲ್ಲಿ ಯಥೇಚ್ಛವಾಗಿರಲಿವೆ. ಎತ್ತಿನ ಗಾಡಿಯ ಜಾಲಿ ಮತ್ತು ವಿವಿಧ ಆಕಾರದ ಆಕರ್ಷಕ ತೈಲ ಅಳತೆಗಳು, ಜಾಲಿ ಕುಸುರಿಯೊಂದಿಗಿನ ನಾಣ್ಯದ ಪೆಟ್ಟಿಗೆಗಳು ಮತ್ತು ಅಡಿಕೆ ಕತ್ತರಿಗಳ ಸಹಿತ ಪ್ರಾಚೀನ ಹಿತ್ತಾಳೆಯ ಹಸ್ತಕೃತಿಗಳ ಸಂಗ್ರಹವಿದೆ. ಕ್ಯಾನ್‍ವಾಸ್ ಮೇಲಿನ ಪೈಂಟಿಂಗ್‍ಗಳು ಇನ್ನೊಂದು ಆಕರ್ಷಣೆಯಾಗಿದೆ. ಪೆಂಡೆಂಟ್‍ಗಳು, ಬಳೆಗಳು, ಪದಕಗಳು, ಮತ್ತು ಹೇರ್ ಪಿನ್‍ಗಳ ಶ್ರೇಣಿ, ಜತೆಗೆ ಮುತ್ತಿನ ಆಭರಣ ಮತ್ತು ಕುಂಕುಮ ಡಬ್ಬಿಗಳ ಶ್ರೇಣಿಯಿದೆ.
No comments:
Post a Comment